ಮುಳ್ಳೇರಿಯ: ನೆಕ್ರಾಜೆ ಸಂತಾನ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಮೇ 12ರಂದು ಜರಗುವ ಲಕ್ಷದೀಪೋತ್ಸವದ ಮುನ್ನುಡಿಯಾಗಿ ಲಕ್ಷದೀಪೋತ್ಸವ ಸಮಿತಿಯ ಪದಾಧಿಕಾರಿಗಳು ಒಡಿಯೂರು ಶ್ರೀ ಶ್ರೀ ಮಾತಾನಂದಮಯಿ ಅಮ್ಮನವರನ್ನು ಭೇಟಿಯಾದರು.
ಈ ಸಂದರ್ಭದಲ್ಲಿ ಸಾಧ್ವಿ ಮಾತಾನಂದಮಯಿ ಮಾತನಾಡಿ, ಸತ್ಕಾರ್ಯ ಹಾಗೂ ಸತ್ ಚಿಂತನೆಯಿಂದ ಮಾಡುವ ಸೇವೆ ನಿತ್ಯವೂ ನಡೆಯಬೇಕು. ಲಕ್ಷ ದೀಪೋತ್ಸವವು ಅತ್ಯಂತ ವಿಶೇಷ ಹಾಗೂ ಶ್ರೇಷ್ಠ ಸೇವೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಲಕ್ಷದೀಪೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ನೆಲ್ಲಿತ್ತಲ, ಸಮಿತಿಯ ಪದಾಧಿಕಾರಿಗಳಾದ ಗಣೇಶ್ ವತ್ಸ, ಬಾಲಕೃಷ್ಣ ಸುವರ್ಣ, ಬಾಲಕೃಷ್ಣ ನಾಯಕ್ ಮುಂತಾದವರು ಉಪಸ್ಥಿತರಿದ್ದರು.



.jpg)
