HEALTH TIPS

ಅಭಿನಯ ದೇಹದ ರಸಾಯನಶಾಸ್ತ್ರ: ಚಲನಚಿತ್ರ ನಿರ್ಮಾಪಕರ ಸಂಘದ ನೇತೃತ್ವದಲ್ಲಿ ಮೂರು ದಿನಗಳ ಸಂಡೇ ಥಿಯೇಟರ್ ಶಿಬಿರ ಆರಂಭ

        ಕಾಸರಗೋಡು: 'ನಟನೆ ಎಂದರೆ ಪ್ರೇಕ್ಷಕರಿಗೆ ರಸದೌತಣ ಉಂಟು ಮಾಡುವ ರಸಾಯನ' ಎಂಬ ಪಾಠದೊಂದಿಗೆ ಚಿತ್ರರಸಿಕರ ಬಳಗದ ನೇತೃತ್ವದಲ್ಲಿ ನಡೆದ ಚಲನಚಿತ್ರ ಅಭಿನಯ ಶಿಬಿರ ನೋಡುಗರ ಮನಸೂರೆಗೊಂಡಿದೆ. ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಿಯನಂದನನ್ ನೇತೃತ್ವದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಜಿಲ್ಲೆಯ ಹಿರಿಯರು, ಮಕ್ಕಳು ಸೇರಿದಂತೆ 75 ಮಂದಿ ಭಾಗವಹಿಸುತ್ತಿದ್ದಾರೆ. ‘ಅಭಿನಯಸಾರಿಂ’ ಎಂಬ ಹೆಸರಿನಲ್ಲಿ ಶಿಬಿರ ಅತ್ಯಂತ ವಿಭಿನ್ನವಾಗಿ ಸಿದ್ಧಗೊಳ್ಳುತ್ತಿದೆ.


         ರಂಗಭೂಮಿಯ ನಟನೆಗಿಂತ ಚಲನಚಿತ್ರ ನಟನೆ ಹೇಗೆ ಭಿನ್ನವಾಗಿದೆ ಎನ್ನುವುದೇ ಶಿಬಿರ. ಕಾಸರಗೋಡು ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ಕುತ್ತಿಕೋಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಡೇ ಥಿಯೇಟರ್ ನ ಮೂರು ದಿನಗಳ ಶಿಬಿರ ಶುಕ್ರವಾರ ಆರಂಭವಾಯಿತು. ನೆರೂಡ ಗ್ರಂಥಾಲಯದ ಸಹಯೋಗದಲ್ಲಿ ಆಯೋಜಿಸಿರುವ ಶಿಬಿರವನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪಿ.ಗೋಪಾಲನ್ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು.

           ಪಾಂಡಿಚೇರಿ ಕೇಂದ್ರೀಯ ವಿಶ್ವವಿದ್ಯಾನಿಲಯದಿಂದ ರಂಗಭೂಮಿ ಅಧ್ಯಯನ  ಪೂರ್ಣಗೊಳಿಸಿದ ನ್ಯಾಯವಾದಿ. ಎನ್.ಎಸ್.ತಾರಾ, ಶಿನಿಲ್ ವಡಕರ, ಮಣಿಪ್ರಸಾದ್ ಚಲನಚಿತ್ರ ನಟರಾದ ಅನೂಪ್ ಚಂದ್ರನ್, ರಾಜೇಶ್ ಮಾಧವನ್ ಮತ್ತು ಬಾಬು ಅಣ್ಣೂರ್ ಅವರು ವಿವಿಧ ದಿನಗಳಲ್ಲಿ ತರಗತಿಗಳನ್ನು ನಡೆಸುವರು. ರಂಗ ನಿರ್ದೇಶಕ ಗೋಪಿ ಕುತ್ತಿಕೋಲ್ ಸ್ವಾಗತಿಸಿ, ಮಣಿಕಂಠನ್ ಕಾವುಂಗಲ್ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries