HEALTH TIPS

ವಿಶ್ವ ಪರಿಸರ ದಿನ 2023: ಮನೆಯಲ್ಲಿ ಈ ಗಿಡಗಳಿದ್ದರೆ ಕಲುಷಿತ ಗಾಳಿ ಶುದ್ಧೀಕರಿಸುತ್ತೆ!

 ವಾಯುಮಾಲಿನ್ಯ ಹೆಚ್ಚಳದಿಂದಾಗಿ ಜನ ಉಸಿರಾಡೋದೇ ಕಷ್ಟ ಎಂಬತಾಗಿದೆ. ಮನೆಯ ಹೊರಗೆ ಮಾತ್ರವಲ್ಲ, ಮನೆಯ ಒಳಗಡೆನೂ ಕೂಡ ಶುದ್ಧಗಾಳಿ ಲಭ್ಯವಾಗುತ್ತಿಲ್ಲ. ಇಷ್ಟು ದಿನ ಹಳ್ಳಿಗಳು ಹಚ್ಚ ಹಸಿರಾಗಿತ್ತು. ಆದ್ರೀಗ ಅಭಿವೃದ್ಧಿ ಹೆಸರಿನಲ್ಲಿ ಹಳ್ಳಿಗಳಲ್ಲೂ ಹಸಿರು ಕಾಣದಂತೆ ಮಾಡ್ಬಿಟ್ಟಿದ್ದಾರೆ. ಇನ್ನೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ಜನ ಬೆಳಗ್ಗೆ ಎದ್ದ ತಕ್ಷಣ ಶುದ್ಧ ಗಾಳಿಗಾಗಿ ಪಾರ್ಕ್ ಗೆ ಹೋಗ್ತಾರೆ.

ಇಷ್ಟೆಲ್ಲಾ ಮಾಡುವ ಬದಲು ನೀವು ಮನೆಯಲ್ಲೇ ಶುದ್ಧ ಗಾಳಿಯನ್ನು ಪಡೆದುಕೊಳ್ಳಬಹುದು. ಅದು ಹೇಗಂದ್ರೆ ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿದ್ರೆ ಸಾಕು. ಮನೆಯವರೆಲ್ಲರೂ ಶುದ್ಧಗಾಳಿಯನ್ನು ಸೇವಿಸ್ಬಹುದು. ಈ ಗಿಡಗಳು ಅಶುದ್ಧ ಗಾಳಿಯನ್ನು ಶುದ್ಧಗೊಳಿಸುವ ಶಕ್ತಿಯನ್ನು ಹೊಂದಿದೆ.
1. ಮನಿ ಪ್ಲಾಂಟ್ ಮನೆಯೊಳಗಡೆ ಗಾಳಿಯನ್ನು ಶುದ್ಧೀಕರಿಸಲು ಮನಿ ಪ್ಲಾನ್ ಉತ್ತಮ ಸಸ್ಯವಾಗಿದೆ. ಈ ಸಸ್ಯದ ಜನಪ್ರಿಯತೆಗೆ ಪ್ರಮುಖ ಕಾರಣವೆಂದರೆ ಅದರ ಹೆಸರು. ಎರಡನೇಯದ್ದು ಇದರ ನಿರ್ವಹಣೆ ತುಂಬಾನೇ ಸುಲಭ. ಈ ಸಸ್ಯವು ಯಾವುದೇ ಪರಿಸ್ಥಿತಿಗೂ ಒಗ್ಗಿಕೊಳ್ಳುತ್ತದೆ. ಒಳಾಂಗಣ, ಹೊರಾಂಗಣ, ನೀರೊಳಗಿನ, ಮಣ್ಣಿನಲ್ಲಿ, ಎಲ್ಲಿಯಾದರೂ ಕೂಡ ಮನಿ ಪ್ಲಾಂಟ್ ಬದುಕುತ್ತದೆ. ಈ ಸಸ್ಯಕ್ಕೆ ಮದ್ಯಮ ಬೆಳಕು ಮತ್ತು ನೀರಿನ ಅವಶ್ಯಕತೆಯಿದೆ. ಈ ಸಸ್ಯದ ಎಲೆಯ ಆಕಾರವು ಕೊಂಚ ವಿಶೇಷವಾಗಿದೆ.

2. ಸ್ನೇಕ್ ಪ್ಲಾಂಟ್

ಸ್ನೇಕ್ ಪ್ಲಾಂಟ್ ನೋಡೋದಕ್ಕೆ ತುಂಬಾನೇ ವಿಭಿನ್ನವಾಗಿದೆ. ಕಡಿಮೆ ಹಾಗೂ ಹೆಚ್ಚು ಬೆಳಕಿದ್ದರೂ ಈ ಸಸ್ಯ ಸರಾಗವಾಗಿ ಬೆಳೆಯುತ್ತದೆ. ಈ ಸಸ್ಯವು ನೀರಿಲ್ಲದೆ ವಾರಗಟ್ಟಲೆ ಬದುಕಬಲ್ಲದು. ಈ ಸಸ್ಯದ ಅಡ್ಡ ಹೆಸರು ಅತ್ತೆಯ ನಾಲಿಕೆ (Mother-in-law's tongue). ನಾಸಾದ ಪ್ರಕಾರ ಒಳಾಂಗಣ ಗಾಳಿಯನ್ನು ಶುದ್ಧೀಕರಿಸಲು ಸ್ನೇಕ್ ಪ್ಲಾಂಟ್ ಅತ್ಯುತ್ತಮ ಸಸ್ಯವಾಗಿದೆ.

3. ಪೀಸ್ ಲಿಲ್ಲಿ (Peace Lily)

ಪೀಸ್ ಲಿಲ್ಲಿ ನೋಡೋದಕ್ಕೆ ಸುಂದರವಾಗಿದೆ. ಮತ್ತು ಇದೊಂದು ಬಿಳಿ ಬಣ್ಣದ ಹೂ ಬಿಡುವ ಸಸ್ಯವಾಗಿದೆ. ಇದು ಅತ್ಯಂತ ಜನಪ್ರಿಯ ಒಳಾಂಗಣ ಸಸ್ಯಗಳಲ್ಲಿ ಒಂದಾಗಿದೆ. ಇದು ನಾವು ವಾಸಿಸುವ ಜಾಗವನ್ನು ಉತ್ತಮವಾಗಿಸುತ್ತದೆ. ಮತ್ತು ಮನೆಯ ಒಳಗಿರುವ ವಿಷವನ್ನು ತೆಗೆದು ಹಾಕುತ್ತದೆ. ಪೀಸ್ ಲಿಲ್ಲಿ ಸಸ್ಯಕ್ಕೆ ಅತಿಯಾಗಿ ನೀರುಹಾಕುವುದಕ್ಕಿಂತ ಕಡಿಮೆ ನೀರುಹಾಕಿದರೆ ಉತ್ತಮ. ಈ ಸಸ್ಯಕ್ಕೆ ವರ್ಷದಲ್ಲಿ ಒಂದರಿದ ಎರಡು ಬಾರಿ ಮಾತ್ರ ಗೊಬ್ಬರ ಹಾಕಿದರೆ ಸಾಕು. ಈ ಸಸ್ಯವು ಕಡಿಮೆ ಮತ್ತು ಮಧ್ಯಮ ಸೂರ್ಯನ ಬೆಳಕಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ.

4. ಸ್ಪೈಡರ್ ಪ್ಲಾಂಟ್

ಸ್ಪೈಡರ್ ಪ್ಲಾಂಟ್ ಅನ್ನು ಬೆಳೆಸೋದು ತುಂಬಾನೇ ಸುಲಭ. ಇದು ತುಂಬಾ ವೇಗ ಮತ್ತು ಸೊಗಸಾಗಿ ಬೆಳೆಯುತ್ತದೆ. ಸಸ್ಯವು ಅತ್ಯಂತ ದಟ್ಟವಾದ ಮತ್ತು ತೆಳುವಾದ ಎಲೆಯ ಮಾದರಿಯನ್ನು ಹೊಂದಿದೆ. ಇದು ನೋಡೋದಕ್ಕೆ ಜೇಡದ ಮಾದರಿಯನ್ನು ಹೊಂದಿರೋದಿಂದ ಈ ರೀತಿ ಕರೆಯಲಾಗುತ್ತದೆ. ಸ್ಪೈಡರ್ ಪ್ಲಾಂಟ್ ನ ನಿರ್ವಹಣೆಗೆ ಹೆಚ್ಚು ವೆಚ್ಚ ತಗುಲೋದಿಲ್ಲ. ಈ ಸಸ್ಯವು ನೇತಾಡುವ ಮಡಕೆಗಳಲ್ಲಿ ತುಂಬಾ ಸುಂದರವಾಗಿ ಕಾಣುತ್ತದೆ.

5. ಅರೆಕಾ ಪಾಮ್ ( Areca Palm )

ಮಡಗಾಸ್ಕರ್ ಮೂಲದ ಹೂಬಿಡುವ ಸಸ್ಯವು ಗಾಳಿಯನ್ನು ಶುದ್ಧೀಕರಿಸುವ ಸಸ್ಯವಾಗಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಈ ಸಸ್ಯವು ನೋಡಲು ಸುಂದರವಾಗಿದ್ದು, ಉದ್ದವಾದ ಮತ್ತು ಸೊಂಪಾದ ಹಸಿರು ಎಲೆಗಳನ್ನು ಹೊಂದಿದೆ. ಮತ್ತು ಇದರ ಎಲೆಗಳು ದಟ್ಟವಾಗಿದೆ. ನೋಡಲು ಕೊಂಚ ತಾಳೆಗಿಡದಂತೆ ಇದ್ದು, ಸ್ವಲ್ಪ ಉದ್ದವಾಗಿ ಬೆಳೆಯುತ್ತದೆ.

6. ರಬ್ಬರ್ ಸಸ್ಯ

ಇದರ ಹೆಸರು ರಬ್ಬರ್ ಸಸ್ಯ. ನೋಡೋದಕ್ಕೆ ಕಪ್ಪು-ನೇರಳೆ ಬಣ್ಣದಲ್ಲಿದೆ. ಇದು ನೋಡೋದಕ್ಕೆ ತುಂಬಾನೇ ಸುಂದರವಾಗಿ ಕಾಣುತ್ತದೆ. ಗಾಳಿಯನ್ನು ಶುದ್ಧೀಕರಿಸೋದ್ರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಸಸ್ಯವು ಪರೋಕ್ಷ ಸೂರ್ಯನ ಬೆಳಕಿನಲ್ಲಿಯೂ ಬೆಳೆಯುತ್ತದೆ. ಇದರ ಎಲೆಯೂ ತುಂಬಾನೇ ಮೃದುವಾಗಿರೋದ್ರಿಂದ ಇದನ್ನು ತುಂಬಾನೇ ಜಾಗರೂಕತೆಯಿಂದ ನಿಭಾಯಿಸಬೇಕು. ಇದರ ಎಲೆಯನ್ನು ಪ್ರತಿನಿತ್ಯ ಸ್ವಚ್ಛಗೊಳಿಸಿದ್ರೆ ಇದು ಪಳಪಳನೆ ಹೊಳೆಯುತ್ತದೆ.

7. ಚೈನೀಸ್ ಎವರ್ ಗ್ರೀನ್

ಹೆಸರೇ ಸೂಚಿಸುವಂತೆ ಇದು ನಿಜವಾಗಿಯೂ ನಿತ್ಯಹರಿದ್ವರ್ಣ ಸಸ್ಯವಾಗಿದೆ. ಈ ಸಸ್ಯವು 100 ಕ್ಕೂ ಹೆಚ್ಚು ಪ್ರಭೇದಗಳನ್ನು ಹೊಂದಿದೆ. ಇದು ಕಡಿಮೆ ನೀರಿನಲ್ಲಿಯೂ ಬೆಳೆಯುವ ಸಸ್ಯವಾಗಿದೆ. ಇದು ಪರೋಕ್ಷ ಪ್ರಕಾಶಮಾನವಾದ ಬೆಳಕಿನಲ್ಲೂ ಬೆಳೆಯುತ್ತದೆ. ಈ ಸಸ್ಯ ಗಾಳಿಯನ್ನು ಶುದ್ಧೀಕರಿಸಲು ಅತ್ಯತ್ತಮ ಸಸ್ಯ. ಅಷ್ಟೇ ಅಲ್ಲ, ಇದು ತನ್ನ ಸೌಂದರ್ಯದಿಂದಲೂ ಎಲ್ಲರ ಗಮನ ಸೆಳೆಯುತ್ತದೆ.

ಈ ಸಸ್ಯಗಳನ್ನು ಮನೆಯಲ್ಲಿ ಆರಾಮಾಗಿ ಬೆಳೆಸಬಹುದು. ಇದು ನೋಡೋದಾಕ್ಕೂ ಸುಂದರವಾಗಿರುತ್ತದೆ. ಹಾಗೂ ನಮಗೆ ಶುದ್ಧ ಗಾಳಿಯನ್ನು ಒದಗಿಸುತ್ತದೆ.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries