HEALTH TIPS

ಈ ತಪ್ಪುಗಳು ವಿಚ್ಛೇದನಕ್ಕೆ ಕಾರಣವಾದಿತು ಜೋಕೆ

 ಸಂಸಾರದ ಬಂಡಿಯನ್ನು ಗಂಡ-ಹೆಂಡತಿ ಇಬ್ಬರು ಸೇರಿ ಎಳೆದಾಗ ಮಾತ್ರ ಆ ಸಂಸಾರ ಚೆನ್ನಾಗಿರೋದಕ್ಕೆ ಸಾಧ್ಯ. ಸಂಸಾರದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗೋದು ಸಹಜ. ಆದರೆ ಇಬ್ಬರು ಸೇರಿ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಹೋಗಬೇಕು. ಆದರೆ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಮಾಡಿದ ತಪ್ಪನ್ನೇ ಪದೇ ಪದೇ ಮಾಡುತ್ತಿದ್ದರೆ ಅಂತಹ ಸಂಸಾರ ಕೊನೆವರೆಗೂ ಉಳಿಯೋದಿಲ್ಲ. ಇವುಗಳು ವಿಚ್ಛೇದನದಲ್ಲಿ ಕೊನೆಯಾಗುತ್ತದೆ. ಅಷ್ಟಕ್ಕು ದಾಂಪತ್ಯದಲ್ಲಿ ಯಾವ ರೀತಿಯ ತಪ್ಪುಗಳು ವಿಚ್ಛೇದನದಲ್ಲಿ ಕೊನೆಯಾಗುತ್ತೆ ಅನ್ನೋದನ್ನು ತಿಳಿಯೋಣ.

1. ಸಂವಹನದ ಕೊರತೆ
ಸಂವಹನಕ್ಕೆ ಎಂತಹ ಸಮಸ್ಯೆಗಳನ್ನು ಸರಿ ಮಾಡುವ ತಾಕತ್ತು ಇದೆ. ಕೆಲವೊಂದು ದಾಂಪತ್ಯದಲ್ಲಿ ಏನಾಗುತ್ತೆ ಅಂದ್ರೆ ಇಬ್ಬರ ಮಧ್ಯೆ ಹೆಚ್ಚಿನ ಮಾತುಕತೆಯೇ ಇರೋದಿಲ್ಲ. ಇಬ್ಬರು ಕೂಡ ತಮ್ಮ ಮನಸ್ಸಿನ ಮಾತನ್ನು ಸಂಗಾತಿಯ ಜೊತೆಗೆ ಹೇಳಿಕೊಳ್ಳೋದಿಲ್ಲ. ಏನಾದರೂ ಸಮಸ್ಯೆ ಆದಾಗ ಗಂಡನು ಹೆಂಡತಿಯ ಮೇಲೆ ಕೂಗಾಡುತ್ತಾನೆ ಹೊರತು ಅದನ್ನು ಕುಳಿತು ಮಾತನಾಡಿ ಸರಿ ಮಾಡೋ ಪ್ರಯತ್ನವನ್ನೇ ಮಾಡೋದಿಲ್ಲ. ಇಂತಹ ಸಂಬಂಧಗಳು ನಿಧಾನವಾಗಿ ಹಾಳಾಗುತ್ತದೆ. ಕೊನೆಗೆ ಇದು ವಿಚ್ಛೇದನದವರೆಗೂ ಹೋಗುತ್ತದೆ.
2. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳದಿರುವು
ಪತಿ-ಪತ್ನಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳುವಂತಿರಬೇಕು. ಯಾವಾಗ ನೀವು ನಿಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಆಗ ಇಬ್ಬರ ಮಧ್ಯೆ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತದೆ. ಗಂಡನ ನಿರ್ಧಾರಗಳನ್ನು ಹೆಂಡತಿ ಒಪ್ಪಿಕೊಳ್ಳೋದಕ್ಕೆ ತಯಾರಿರೋದಿಲ್ಲ. ಹಾಗೆಯೇ ಹೆಂಡತಿಯ ನಿರ್ಧಾರಗಳನ್ನು ಗಂಡ ಒಪ್ಪಿಕೊಳ್ಳೋದಿಲ್ಲ. ಹೀಗಾದಾಗ ಸಂಬಂಧ ಕ್ರಮೇಣ ಹಾಳಾಗಿ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತದೆ.
3. ಆರ್ಥಿಕ ಸಮಸ್ಯೆ ಹೆಚ್ಚಾದಾಗ ಆಸೆಗಳು ಯಾರಿಗೆ ಇರೋದಿಲ್ಲ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಆಸೆ ಇರುತ್ತದೆ. ಅದ್ರಲ್ಲೂ ಮನುಷ್ಯನ ಆಸೆಗಳಿಗೆ ಕೊನೆ ಅನ್ನೋದೇ ಇರೋದಿಲ್ಲ. ಅದ್ರಲ್ಲೂ ಒಂದು ಮನೆಯಲ್ಲಿ ಪತಿ ಮಾತ್ರ ದುಡಿಯುತ್ತಿದ್ದಾಗ ಆತನ ಮೇಲೆ ಮನೆಯ ಸಂಪೂರ್ಣ ಜವಾಬ್ದಾರಿ ಇರುತ್ತದೆ. ಬರೋ ಸಂಭಳದಲ್ಲಿ ಸಂಸಾರಕ್ಕೆ ಖರ್ಚು ಮಾಡಿ ಆತ ತನ್ನ ಸಂಸಾರಕ್ಕಾಗಿ ಕೊಂಚ ಮಾತ್ರ ಉಳಿತಾಯ ಮಾಡೋದಕ್ಕೆ ಸಾಧ್ಯವಾಗುತ್ತದೆ. ಇದರ ಮಧ್ಯೆ ಹೆಂಡತಿಗೆ ನೂರಾರು ಆಸೆಗಳು ಇರುತ್ತದೆ. ಆ ಆಸೆಗಳನ್ನು ಗಂಡನಿಂದ ಪೂರೈಸೋದಕ್ಕೆ ಸಾಧ್ಯವಾಗೋದಿಲ್ಲ. ದಿನ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಶುರುವಾಗುತ್ತದೆ. ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತದೆ. ಸಂಸಾರದಲ್ಲಿ ನೆಮ್ಮದಿ ಅನ್ನೋದೇ ಇರೋದಿಲ್ಲ. ಕೊನೆಗೆ ಇಬ್ಬರೂ ಒಪ್ಪಿ ವಿಚ್ಛೇದನಕ್ಕೆ ಮುಂದಾಗುತ್ತಾರೆ. 
4. ಸಮಯ ಕೊಡದೇ ಇರುವುದು ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಕೆಲಸಕ್ಕೆ ಹೋಗೋದ್ರಿಂದ ದಂಪತಿಗಳಿಗೆ ತಮ್ಮ ವೈಯಕ್ತಿಕ ಸಮಯ ಸಿಗೋದಿಲ್ಲ. ಕೆಲಸದಿಂದ ಬಂದ ಮೇಲೆ ಪತ್ನಿ ಮನೆ ಕೆಲಸದಲ್ಲಿ ಬ್ಯೂಸಿಯಾಗುತ್ತಾಳೆ. ಇನ್ನೂ ವೀಕೆಂಡ್ ನಲ್ಲಿ ಮಾತ್ರ ಇಬ್ಬರಿಗಾಗಿ ಸಮಯ ಸಿಗೋದು. ಈ ಸಮಯದಲ್ಲೂ ಪತಿ-ಪತ್ನಿ ಒಬ್ಬರಿಗಾಗಿ ಮತ್ತೊಬ್ಬರು ಹೆಚ್ಚಿನ ಸಮಯ ನೀಡೋದಿಲ್ಲ. ಹೀಗಾದಾಗ ಕೂಡ ಸಂಬಂಧ ಸರಿ ಇರೋದಿಲ್ಲ. ಇಬ್ಬರ ಮಧ್ಯೆ ಒಂದು ರೀತಿಯ ಅಂತರ ಹೆಚ್ಚಾಗುತ್ತದೆ.

5. ಪ್ರತಿಯೊಂದು ವಿಚಾರಕ್ಕೂ ವಾದಿಸುವುದು
ಪ್ರತಿಯೊಂದು ವಿಚಾರದಲ್ಲೂ ಗಂಡ ಹಾಗೂ ಹೆಂಡತಿಯ ಅಭಿಪ್ರಾಯ ಬೇರೆಯದ್ದೇ ಆಗಿರುತ್ತದೆ. ಪ್ರತಿ ಸಲ ಒಬ್ಬರ ಅಭಿಪ್ರಾಯವೇ ಮೇಲಾಗಬೇಕು ಅಂತ ಅಂದುಕೊಳ್ಳಬಾರದು. ಒಂದು ಸಾರಿ ಗಂಡನ ಅಭಿಪ್ರಾಯಗಳಿಗೆ ಪ್ರಾಮುಖ್ಯತೆ ನೀಡಿದ್ರೆ ಮತ್ತೊಂದು ಸಾರಿ ಹೆಂಡತಿಯ ಅಭಿಪ್ರಾಯಗಳಿಗೆ ಪ್ರಾಮುಖ್ಯತೆ ನೀಡಬೇಕು. ಅದನ್ನು ಬಿಟ್ಟು ನನ್ನ ಮಾತೇ ಮೇಲಾಗಬೇಕೆಂದು ವಾದಿಸುತ್ತಾ ಹೋದರೆ ಅಂತಹ ಸಂಬಂಧ ಚೆನ್ನಾಗಿರೋದಕ್ಕೆ ಸಾಧ್ಯವಾಗೋದಿಲ್ಲ.

6. ಒರಟಾಗಿ ವರ್ತಿಸುವುದು
ಕೆಲವು ಸಂಬಂಧಗಳಲ್ಲಿ ಗಂಡದಿರು ಹೆಂಡತಿಗೆ ಒಂಚೂರು ಬೆಲೆ ನೀಡೋದಿಲ್ಲ. ತಾನು ಹೊರಗಡೆ ಹೋಗಿ ದುಡಿಯುತ್ತೇನೆ ಅನ್ನೋ ದರ್ಪವನ್ನು ತೋರಿಸುತ್ತಾರೆ. ಕುಡಿದು ಬಂದು ಹೆಂಡತಿಯ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಇನ್ನೂ ಕೆಲವು ಸಂಬಂಧಗಳಲ್ಲಿ ಪತ್ನಿಯರು ತಮ್ಮ ಗಂಡದಿರ ಮೇಲೆ ದರ್ಪಾ ತೋರುತ್ತಾರೆ. ಗಂಡನಿಗಿಂತ ಹೆಚ್ಚು ದುಡಿಯುತ್ತೇನೆ ಎಂಬ ಅಹಂಕಾರ ತೋರುತ್ತಾರೆ. ಈ ರೀತಿ ಇದ್ದ ಸಂಬಂಧಗಳು ಕೊನೆವರೆಗೂ ಉಳಿಯೋದು ಅನುಮಾನ.

ಸಂಬಂಧದಲ್ಲಿ ಆಗುವ ಸಣ್ಣ ಪುಟ್ಟ ತಪ್ಪುಗಳೇ ಸಂಬಂಧ ಮುರಿದು ಬೀಳೋದಕ್ಕೆ ಕಾರಣ. ಪತಿ-ಪತ್ನಿ ಹೊಂದಾಣಿಕೆಯಿಂದ ಸಂಸಾರ ನಡೆಸಿದ್ರೆ ಈ ಸಮಸ್ಯೆಗಳು ಖಂಡಿತ ಬರೋದಿಲ್ಲ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries