HEALTH TIPS

ಏಕರೂಪ ಸಂಹಿತೆ: ಜುಲೈ 3ಕ್ಕೆ ಸಂಸದೀಯ ಸಮಿತಿ ಸಭೆ

               ವದೆಹಲಿ: ದೇಶದಲ್ಲಿ ವಿವಿಧ ಸಮುದಾಯಗಳಿಗೆ ಸಂಬಂಧಿಸಿ ಪ್ರಸ್ತುತ ಅಸ್ತಿತ್ವದಲ್ಲಿರುವ ಬೇರೆ ಬೇರೆ ವೈಯಕ್ತಿಕ ಕಾನೂನುಗಳಲ್ಲಿನ ಅವಕಾಶಗಳ ಕುರಿತು ಕಾನೂನು ಸಚಿವಾಲಯ ಮತ್ತು ಕಾನೂನು ಆಯೋಗದಿಂದ ಅಭಿಪ್ರಾಯ ಕ್ರೋಡೀಕರಿಸಲು ಸಂಸದೀಯ ಸ್ಥಾಯಿ ಸಮಿತಿಯು ನಿರ್ಧರಿಸಿದೆ.

               ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯದ ಸಂಸದೀಯ ಸಮಿತಿಯು ಈ ಬಗ್ಗೆ ಚರ್ಚಿಸಲು ಜುಲೈ 3ರಂದು ಸಭೆ ಕರೆದಿದೆ.

                ಏಕರೂಪ ನಾಗರಿಕ ಸಂಹಿತೆಯು ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ ವಿಷಯ. ವೈಯಕ್ತಿಕ ಕಾನೂನುಗಳಲ್ಲಿನ ಅವಕಾಶಗಳ ಬಗ್ಗೆ ಆಳ ಅಧ್ಯಯನದ ಅಗತ್ಯವಿದೆ. ಹಾಗಾಗಿ, ಯುಸಿಸಿಗೆ ಸಂಬಂಧಿಸಿದ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಆ ನಂತರವೇ ಶಿಫಾರಸು ಮಾಡಬೇಕು ಎಂದು ಕೇಂದ್ರ ಸರ್ಕಾರವು ಕಾನೂನು ಆಯೋಗವನ್ನು ಈಗಾಗಲೇ ಕೋರಿದೆ. ಹಾಗಾಗಿ, ಈ ಸಭೆಯು ಮಹತ್ವ ಪಡೆದಿದೆ.

               ಬಿಜೆಪಿ ಸಂಸದ ಸುಶೀಲ್‌ ಕುಮಾರ್‌ ಮೋದಿ ಅಧ್ಯಕ್ಷತೆಯ ಸಂಸದೀಯ ಸಮಿತಿಯು, ಮದುವೆ, ವಿಚ್ಛೇದನ, ಮಕ್ಕಳ ರಕ್ಷಣೆ ಮತ್ತು ಪಾಲನೆ, ದತ್ತು ಸ್ವೀಕಾರ, ಉತ್ತರಾಧಿಕಾರಕ್ಕೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳ ಬಗ್ಗೆ ಹಲವು ಭಾಗೀದಾರರಿಂದ ಅಭಿಪ್ರಾಯ ಪಡೆಯಲು ತೀರ್ಮಾನಿಸಿದೆ.

21ನೇ ಕಾನೂನು ಆಯೋಗದ ಅವಧಿಯು 2018ರ ಆಗಸ್ಟ್‌ 31ಕ್ಕೆ ಕೊನೆಗೊಂಡಿದೆ. ಈ ಹಂತದಲ್ಲಿ ಯುಸಿಸಿ ಜಾರಿ ಅಗತ್ಯವೂ ಇಲ್ಲ, ಅಪೇಕ್ಷಣೀಯವೂ ಅಲ್ಲ ಎಂದು ಈ ಆಯೋಗವು ವರದಿ ನೀಡಿತ್ತು. ಈ ಆಯೋಗದ ಸಮಾಲೋಚನಾ ವರದಿಯ ಪ್ರತಿಯನ್ನು ಸಂಸದೀಯ ಸಮಿತಿಯ ಸದಸ್ಯರಾಗಿರುವ ಎಲ್ಲ 30 ಸಂಸದರಿಗೂ ನೀಡಲಾಗಿದೆ.

              ಪ್ರಸ್ತುತ 22ನೇ ಕಾನೂನು ಆಯೋಗ ರಚನೆಗೊಂಡಿದ್ದು, ನಿವೃತ್ತ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ಇದರ ಅಧ್ಯಕ್ಷರಾಗಿದ್ದಾರೆ. ಯುಸಿಸಿ ಕುರಿತು ಈ ಆಯೋಗವು ನಾಗರಿಕರು ಮತ್ತು ಮಾನ್ಯತೆ ಪಡೆದಿರುವ ಧಾರ್ಮಿಕ ಸಂಘಟನೆಗಳಿಂದ ಅಭಿಪ್ರಾಯ ಆಹ್ವಾನಿಸಿದ್ದು, ಸಲ್ಲಿಕೆಗೆ ಜುಲೈ 14ರ ಗಡುವು ನೀಡಿದೆ.

                 ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು, 'ಎರಡು ಕಾನೂನುಗಳಿದ್ದರೆ ದೇಶ ಮುನ್ನಡೆಸಲು ಸಾಧ್ಯವೇ' ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಮತ್ತೊಂದೆಡೆ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಯುಸಿಸಿ ಜಾರಿ ಕುರಿತು ಮಸೂದೆ ರಚನೆ ಸಂಬಂಧ ಅಂತಿಮ ವರದಿ ಸಲ್ಲಿಸಲು ಸಮಿತಿಯೊಂದನ್ನು ರಚಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries