ಕಣ್ಣೂರು: ಆಸ್ಪತ್ರೆಯ ವಾರ್ಡ್‍ನಲ್ಲಿ ಮಹಿಳೆಯೊಬ್ಬರಿಗೆ ಹಾವು ಕಚ್ಚಿದೆ. ಕಣ್ಣೂರಿನ ತಳಿಪರಂಬ ತಾಲೂಕು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ರೋಗಿಯೊಂದಿಗೆ ಉಳಕೊಳ್ಳಲು ಬಂದಿದ್ದ ಚೆಂಬೇರಿ ಮೂಲದ ಲತಾ ಎಂಬುವರಿಗೆ ಹಾವು ಕಚ್ಚಿದೆ. ಲತಾ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.
ನಿನ್ನೆ ರಾತ್ರಿ 12 ಗಂಟೆಗೆ ವಾರ್ಡ್‍ನಲ್ಲಿ ನೆಲಕ್ಕೆ ಮಲಗಿದ್ದ ಲತಾ ಅವರಿಗೆ ವೈಪರ್ ಜಾತಿಯ ಹಾವು ಕಚ್ಚಿದೆ. ಬಾಡಿಗೆ ಕಟ್ಟುತ್ತಿದ್ದ ಪೇ ವಾರ್ಡ್ ನಲ್ಲಿ ಹಾವು ಕಡಿತವಾಗಿದೆ. ಲತಾ ಗರ್ಭಿಣಿ ಮಗಳೊಂದಿಗೆ ಉಳಕೊಳ್ಳಲು ಬಂದಿದ್ದರು. ಹಾವು ಕಿಟಕಿ ಅಥವಾ ಬಾಗಿಲಿನಿಂದ ಕೋಣೆಗೆ ಪ್ರವೇಶಿಸಿರಬಹುದು ಎಂದು ತೀರ್ಮಾನಿಸಲಾಗಿದೆ. ಲತಾ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.


