ನವದೆಹಲಿ: ಅಪಘಾತಕ್ಕೀಡಾಗಿರುವ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದವರಿಗೂ ಪರಿಹಾರ ಸಿಗಲಿದೆ ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಭಾನುವಾರ ತಿಳಿಸಿದ್ದಾರೆ.
0
samarasasudhi
ಜೂನ್ 04, 2023
ನವದೆಹಲಿ: ಅಪಘಾತಕ್ಕೀಡಾಗಿರುವ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದವರಿಗೂ ಪರಿಹಾರ ಸಿಗಲಿದೆ ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಭಾನುವಾರ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಅನುಗುಣವಾಗಿ ಇವರಿಗೂ ಪರಿಹಾರ ನೀಡಲಾಗುತ್ತಿದೆ ಎಂದೂ ವಿವರಿಸಿದ್ದಾರೆ.
ಜೈಶಂಕರ್ ಕರೆ ಮಾಡಿದ ಬ್ಲಿಂಕನ್: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕನ್ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಭಾನುವಾರ ಕರೆ ಮಾಡಿ ರೈಲು ಅಪಘಾತದಲ್ಲಿ ಮಡಿದವರ ಸಂಬಂಧಿಕರಿಗೆ ಸಾಂತ್ವನ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಕರೆ ಮಾಡಿರುವುದಕ್ಕೆ ಬ್ಲಿಂಕನ್ ಅವರಿಗೆ ಧನ್ಯವಾದಗಳು. ಸಂಕಷ್ಟದ ಸಮಯದಲ್ಲಿ ಇಂತಹ ಭಾವನಾತ್ಮಕ ಮಾತುಕತೆ ಹೆಚ್ಚು ಮಹತ್ವದ್ದು' ಎಂದು ನಮೀಬಿಯಾ ಪ್ರವಾಸದಲ್ಲಿರುವ ಜೈಶಂಕರ್ ಟ್ವೀಟ್ ಮಾಡಿದ್ದಾರೆ.