ನವದೆಹಲಿ: ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಗುವಾಹಟಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಜೈ ಲಂಬಾ ನೇತೃತ್ವದಡಿ ಮೂವರು ಸದಸ್ಯರನ್ನು ಒಳಗೊಂಡ ನ್ಯಾಯಾಂಗ ಆಯೋಗ ರಚಿಸಿ ಕೇಂದ್ರ ಸರ್ಕಾರ ಭಾನುವಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.
0
samarasasudhi
ಜೂನ್ 04, 2023
ನವದೆಹಲಿ: ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಗುವಾಹಟಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಜೈ ಲಂಬಾ ನೇತೃತ್ವದಡಿ ಮೂವರು ಸದಸ್ಯರನ್ನು ಒಳಗೊಂಡ ನ್ಯಾಯಾಂಗ ಆಯೋಗ ರಚಿಸಿ ಕೇಂದ್ರ ಸರ್ಕಾರ ಭಾನುವಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.
ನಿವೃತ್ತ ಐಎಎಸ್ ಅಧಿಕಾರಿ ಹಿಮಾಂಶು ಶೇಖರ್ ದಾಸ್ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಅಲೋಕ್ ಪ್ರಭಾಕರ್ ಈ ಆಯೋಗದ ಇತರೆ ಸದಸ್ಯರಾಗಿದ್ದಾರೆ.
ಮೇ 3ರಿಂದ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವಣ ನಡೆದ ಸರಣಿ ಹಿಂಸಾಚಾರದ ಬಗ್ಗೆ ಆಯೋಗವು ತನಿಖೆ ನಡೆಸಲಿದೆ. ವಿವಿಧ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರಕ್ಕೆ ನೈಜ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಹಿಂಸಾಚಾರ ಉಲ್ಬಣಕ್ಕೆ ಕಾರಣವಾದ ಅಂಶಗಳೇನು, ಸರ್ಕಾರಿ ಸಂಸ್ಥೆಗಳು ಅಥವಾ ಅಧಿಕಾರಿಗಳ ವೈಫಲ್ಯ, ಘರ್ಷಣೆ ತಡೆಗೆ ಆಡಳಿತಾತ್ಮಕವಾಗಿ ಕೈಗೊಂಡ ಕ್ರಮಗಳ ಬಗ್ಗೆ ತನಿಖೆ ನಡೆಸಲಿದೆ. ಸಂತ್ರಸ್ತರು ಅಥವಾ ಸಂಘ- ಸಂಸ್ಥೆಗಳ ಅಹವಾಲು ಆಲಿಸಲಿದೆ. ತನಿಖೆ ಆರಂಭಿಸಿದ ಆರು ತಿಂಗಳೊಳಗೆ ಆಯೋಗವು ಕೇಂದ್ರಕ್ಕೆ ವರದಿ ಸಲ್ಲಿಸಬೇಕಿದೆ. ಆದರೆ, ಈ ಅವಧಿಗೂ ಮೊದಲು ಮಧ್ಯಂತರ ವರದಿ ಸಲ್ಲಿಸುವ ನಿರೀಕ್ಷೆಯಿದೆ.
ಇಲ್ಲಿಯವರೆಗೆ ಹಿಂಸಾಚಾರದಿಂದ 80 ನಾಗರಿಕರು ಮೃತಪಟ್ಟಿದ್ದಾರೆ.