ಮಂಜೇಶ್ವರ: ಮಜಿಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವ ಬಹು ವಿಜೃಂಭಣೆಯಿಂದ ಜರುಗಿತು. ಹೂ ಗುಚ್ಚ ನೀಡುವುದರ ಮೂಲಕ ನವಾಗತ ಪುಟಾಣಿಗಳನ್ನು ಸ್ವಾಗತಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಮಜಿಬೈಲು ವಾರ್ಡ್ ಸದಸ್ಯೆ ಆಶಾಲತಾ ಬಿ.ಯಂ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ನಿರ್ವಾಹಕ ಸಮಿತಿಯ ಅಧ್ಯಕ್ಷ ಆಶಾಲತಾ ಆಳ್ವ, ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ಎಂ.ಜಿ ನಾರಾಯಣ ರಾವ್ , ನಿವೃತ್ತ ಶಿಕ್ಷಕÀ ಶಿವಶೆಟ್ಟಿ ಮಜಿಬೈಲು, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಮಜಿಬೈಲು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಜಿಬೈಲು, ಮಜಿಬೈಲು ಸರ್ವಿಸ್ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕರಾದ ಹೇಮಲತಾ ಮತ್ತು ಕಮಲ ಮಜಿಬೈಲು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜೇಶ್ ಮಜಿಬೈಲು, ಆಲಿ ಹಾಜಿ ಮಜಿಬೈಲು, ದಯಾನಂದ ಮಜಿಬೈಲು, ಮೊಹಮ್ಮದ್ ನೌಶಾದ್ ಎಂಬಿವರು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗಿನ ಮಕ್ಕಳಿಗೆ ಉಚಿತವಾಗಿ ನೋಟು ಪುಸ್ತಕ ಸಹಿತ ಕಲಿಕೋಪPರಣ ವಿತರಿಸಿದರು. ಬಾಲಕೃಷ್ಣ ಶೆಟ್ಟಿ ಮತ್ತು ಶ್ರೀ ಹರೀಶ್ ನಾಯಕ್ ಮಜಿಬೈಲು ಇವರು ಒಂದನೇ ತರಗತಿಯ ಮಕ್ಕಳಿಗೆ ಉಚಿತವಾಗಿ ಕೊಡೆ ನೀಡಿದರು. ಶರತ್ ಕೊಡ್ಡೆಯವರು ಎಲ್ಲಾ ಮಕ್ಕಳಿಗೆ ಉಚಿತವಾಗಿ ಡ್ರಾಯಿಂಗ್ ಪುಸ್ತಕಗಳನ್ನು ನೀಡಿದರು. ಸುರೇಶ್ ಕುಲಾಲ್ ಮಜಿಬೈಲು, ವಿನಯ ಮಜಿಬೈಲು ಸಿಹಿತಿಂಡಿ ವಿತರಿಸಿದರು. ಮುಖ್ಯೋಪಾಧ್ಯಾಯ ಸುರೇಶ್ ಬಂಗೇರ ಸ್ವಾಗತಿಸಿ, ಶಿಕ್ಷಕ ದೇವಾನಂದ ಕಾಡೂರು ವಂದಿಸಿದರು.




.jpg)
