ತ್ರಿಶೂರ್: ಮುಸ್ಲಿಂ ಲೀಗ್ ಜೊತೆ ಸಿಪಿಎಂಗೆ ಯಾವುದೇ ಅಸ್ಪøಶ್ಯತೆ ಇಲ್ಲ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ತಿಳಿಸಿದಾರೆ. ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಲೀಗ್ ತೆಗೆದುಕೊಂಡ ಸರಿಯಾದ ನಿರ್ಧಾರಗಳಿಗೆ ಸಿಪಿಎಂ ಬೆಂಬಲ ವ್ಯಕ್ತಪಡಿಸಿದೆ.ಏಕ ನಾಗರಿಕ ಸಂಹಿತೆ ವಿಷಯದಲ್ಲಿ ಲೀಗ್‍ನ ನಿಲುವು ಸರಿಯಾಗಿದೆ ಆದ್ದರಿಂದ ಸಿಪಿಎಂ ಬೆಂಬಲವಿದೆ ಎಂದು ಅವರು ಸ್ಪಷ್ಟಪಡಿಸಿದರು. ಭವಿಷ್ಯದಲ್ಲಿ ಇದೇ ನಿಲುವು ಇರಲಿದೆ ಎಂದಿರುವರು.
ಏಕ ನಾಗರಿಕ ಸಂಹಿತೆ ವಿಚಾರದಲ್ಲಿ ಸಹಕಾರ ನೀಡಬಲ್ಲವರೆಲ್ಲರಿಗೂ ನಮ್ಮ ಬೆಂಬಲವಿದೆ. ದೇಶದ ಪ್ರಸ್ತುತ ವಾತಾವರಣದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾರ್ಯಸಾಧುವಲ್ಲ ಎಂದು ಇಎಂಎಸ್ ಅಭಿಪ್ರಾಯಪಟ್ಟಿದ್ದರು. ಇದನ್ನು ಸ್ಪಷ್ಟವಾಗಿ ಬರೆಯಲಾಗಿದೆ. ಕೆಲವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಗೋವಿಂದನ್ ಹೇಳಿದರು.





