ಬದಿಯಡ್ಕ: ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಬೇಳ ಸೈಂಟ್ ಮೇರೀಸ್ ಕಾಲೇಜು ಎನ್ನೆಸ್ಸೆಸ್ ವಿಣಾಗದ ವಿದ್ಯಾರ್ಥಿಗಳಿಗಗಿ ಮಾದಕ ದ್ರವ್ಯಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನಡೆಯಿತು.
ಕಾಲೇಜು ಪ್ರಾಂಶುಪಾಲ ಫಾದರ್ ರೋಕಿ ಫೆನಾ9ಂಡಿಸ್ ಸಮಾರಂಭ ಉದ್ಘಾಟಿಸಿದರು. ಸಿವಿಲ್ ಎಕ್ಸೈಸ್ ಅಧಿಕಾರಿ ದಾಮೋದರ್ ಅವರು ಅಮಲು ಪಧಾಥ9ಗಳ ದುಷ್ಪರಿಣಾಮಗಳ ಬಗ್ಗೆ ತರಗತಿ ನಡೆಸಿದರು. ಎನ್ನೆಸ್ಸೆಸ್ ಅಧಿಕಾರಿಗಳಾದ ರವೀಂದ್ರ ಪೈ, ಚರಿಷ್ಮ ಹಾಗೂ ಕಾಲೇಜು ಉಪನ್ಯಾಸಕರು ಉಪಸ್ಥಿತರಿದ್ದರು. ಸನಾ ಸ್ವಾಗತಿಸಿದರು. ಜೆನಿಟಾ ಕಾಯ9ಕ್ರಮ ನಿರೂಪಿಸಿದರು. ಶಿಫಾಲಿ ವಂದಿಸಿದರು.


