HEALTH TIPS

ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಸರಣಿ ಕಳ್ಳತನ-ನಗದು ಕಳವು

              ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂಬ್ರಾಣ ಹಾಗೂ ಚೇವಾರಿನಲ್ಲಿ ಸರಣಿ ಕಳವು ನಡೆದಿದ್ದು, ಎರಡೂ ಮನೆಗಳಿಂದ ನಗದು ಕಳವುಗೈಯಲಾಗಿದೆ. ಬಂಬ್ರಾಣ ಜಂಕ್ಷನ್ ಬಳಿಯ ನಿವಾಸಿ, ವಿದೇಶದಲ್ಲಿ ಉದ್ಯೋಗಿಯಾಗಿರುವ ಯೂಸುಫ್ ಮನ್ಯಂಗಲ್ ಹಾಗೂ ಚೇವಾರಿನ ಅಬ್ದುಲ್ ರಹಮಾನ್ ಎಂಬವರ ಮನೆಗಳಿಂದ ಈ ಕಳವು ನಡೆದಿದೆ.

           ಯೂಸುಫ್ ಮನ್ಯಂಗಲ್ ಅವರ ಪತ್ನಿ ನಿಸಾ ತನ್ನ ಮಕ್ಕಳೊಂದಿಗೆ ಬುಧವಾರ ತಾಯಿ ಮನೆಗೆ ತೆರಳಿದ್ದು,  ಗುರುವಾರ ವಾಪಸಾದಾಗ ಕಳವು ಬೆಳಕಿಗೆ ಬಂದಿದೆ. ಮನೆ ಬಾಗಿಲು ಒಡೆದ ಸ್ಥಿತಿಯಲ್ಲಿದ್ದು, ಕಪಾಟು ಚಲ್ಲಾಪಿಲ್ಲಿಯಗಿತ್ತು. ಕಪಾಟಿನಲ್ಲಿದ್ದ 2ಸಾವಿರ ರಊ. ನಗದು ದೋಚಲಾಗಿತ್ತು.

               ಇನ್ನೊಂದು ಪ್ರಕರಣದಲ್ಲಿ ಚೇವಾರು ನಿವಾಸಿ ಅಬ್ದುಲ್ ರಹಮಾನ್ ಅವರ ಮನೆಯಿಂದ ಹಾಡ ಹಗಲು ಮನೆಯ ಕಪಾಟಿನಲ್ಲಿರಿಸಿದ್ದ 15ಸಾವಿರ ರಊ. ನಗದು ಕಳವುಗೈಯಲಾಗಿದೆ.ಅಬ್ದುಲ್ ರಹಮಾನ್ ಕುಟುಂಬ ಬುಧವಾರ ಬೆಳಗ್ಗೆ ಮನೆಗೆ ಬೀಗ ಹಾಕಿ ಹೊರಗೆ ತೆರಳಿದ್ದು, ಸಂಜೆ ಮನೆಗೆ ವಾಪಸಾದಾಗ ಬಾಗಿಲು ಒಡೆದು ಕಳವು ನಡೆಸಿರುವುದು ಪತ್ತೆಯಾಗಿದೆ. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಸ್ತಲಕ್ಕೆ ಬೆಟಿ ನೀಡಿ ಮಹಿತಿ ಸಂಗ್ರಹಿಸಿದ್ದಾರೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವಾರು ಕಳವುಪ್ರಕರಣ ನಡೆದಿದ್ದು, ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries