ಕಾಸರಗೋಡು: ಮರಳು ಮಾಫಿಯಾದೊಂದಿಗೆ ನಂಟು ಹೊಂದಿರುವುದಲ್ಲದೆ, ಅಕ್ರಮ ಮರಳು ಸಗಾಟಕ್ಕೆ ಅವರಿಗೆ ಸಹಾಯ ಒದಗಿಸಿದ ಕಾಸರಗೋಡು ಜಿಲ್ಲೆಯ ಇಬ್ಬರು ಸೇರಿದಂತೆ ಏಳು ಮಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಚಂದೇರ ಪೊಲೀಸ್ ಠಾಣೆಯ ಟಿ.ಎಂ ಅಬ್ದುಲ್ ರಶೀದ್ ಮತ್ತು ಚೀಮೇನಿ ಠಾಣೆಯ ಬಿ. ಹರಿಕೃಷ್ಣನ್, ಕಣ್ಣೂರು ಜಿಲ್ಲೆಯಲ್ಲಿ ಕಣ್ಣೂರು ರೂರಲ್ ಠಾಣೆಯ ಗ್ರೇಡ್ ಎಸ್.ಐ ಸಿ. ಗೋಕುಲನ್ ಸೇರಿದಂತೆ ಏಳು ಮಂದಿ ಅಮಾನತಿಗೊಳಗಾಗಿದ್ದಾರೆ. ಈ ಏಳೂ ಮಂದಿ ಈ ಹಿಂದೆ ತೃಶ್ಯೂರ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ಅಲ್ಲಿನ ಮರಳು ಮಾಫಿಯಾದೊಂದಿಗೆ ಕೈಜೋಡಿಸಿ ಅಕ್ರಮ ಮರಳು ಸಾಗಾಟಕ್ಕೆ ಸಹಾಯ ಒದಗಿಸಿದ ಆರೋಪ ಉಂಟಾಗಿತ್ತು. ನಂತರ ಇವರೆಲ್ಲರನ್ನು ಶಿಕ್ಷಾ ಕ್ರಮದ ಅಂಗವಾಗಿ ರಾಜ್ಯದ ವಿವಿಧ ಠಾಣೆಗಳಿಗೆ ವರ್ಗಾಯಿಸಲಾಗಿತ್ತು. ಇಲಾಖಾ ಮಟ್ಟದಲ್ಲಿ ನಡೆದ ವಿಚಾರಣೆಯ ವರದಿಯ ಮೇರೆಗೆ ಇವರನ್ನು ಅಮಾನತುಗೊಳಿಸಲಾಗಿದೆ. ಕಾಸರಗೋಡು ಜಿಲ್ಲೆಯ ಇನ್ನೂ ಐದು ಮಂದಿ ಮಾಫಿಯಾ ತಂಡಗಳೊಂದಿಗೆ ಸಂಪರ್ಕ ಹೊಂದಿರುವುದನ್ನು ತನಿಖಾ ಇಲಾಖೆ ಪತ್ತೆಹಚ್ಚಿದ್ದು, ಇವರ ವಿರುದ್ಧವೂ ಕ್ರಮ ಉಂಟಾಗುವ ಸಾಧ್ಯತೆಯಿದೆ.




.jpg)
