ಕಾಸರಗೋಡು: ಕೇಂದ್ರ ಸರ್ಕಾರದ 'ಅಗ್ನಿಪಥ್'ನ ಅಗ್ನಿವೀರ್ ಯೋಜನೆಯ ಅಂಗವಾಗಿ 4 ವರ್ಷಗಳ ಕಿರು ಸೇವೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆ ಪರೀಕ್ಷೆಗೆ ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಸಲ್ಲಿಸಬೇಕು. 2023ರ ಜುಲೈ 27ರಂದು ನೋಂದಾವಣೆ ಆರಂಭಗೊಳ್ಳಳಿದ್ದು, ಆ. 17 ಕೊನೆಯ ದಿನಾಂಕವಾಗಿರುತ್ತದೆ.
ಆನ್‍ಲೈನ್ ಪರೀಕ್ಷೆಯು 2023ರ ಅಕ್ಟೋಬರ್ 13ರಿಂದ ನಡೆಯಲಿದೆ. 2003ನೇ ಜೂನ್ 27 ಮತ್ತು 2006ರ ಡಿಸೆಂಬರ್ 27ರ ನಡುವೆ ಜನಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಮತ್ತು ಅರ್ಜಿದಾರರ ಅರ್ಹತೆಯ ವಿವರಗಳಿಗಾಗಿ https://agnipathvayu.cdac.in ವೆಬ್‍ಸೈಟ್ ಸಂಪರ್ಕಿಬಹುದು ಎಂದು ಪ್ರಕಟಣೆ ತಿಳಿಸಿದೆ.




