ಬದಿಯಡ್ಕ: ಬದಿಯಡ್ಕದ ಸೂಪರ್‍ಮಾರ್ಕೆಟ್ ಒಂದರಲ್ಲಿ ಪಂಚಾಯಿತಿ ಕಾರ್ಯದರ್ಶಿಯ ಕರ್ತವ್ಯಕ್ಕೆ ತಡೆಯೊಡ್ಡಿದ ಹಾಗೂ ಪಂಚಾಯಿತಿ ನೌಕರರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಹತ್ತು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾರ್ಯದರ್ಶಿ ದೂರಿನ ಮೇರೆಗೆ ಕೇಸು ದಾಖಲಾಗಿದೆ.
ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ ತೆರಳಿದ್ದ ಪಂಚಾಯಿತಿ ಹಸಿರು ಕ್ರಿಯಾಸೇನೆ ಸದಸ್ಯರು ಸೂಪರ್‍ಮಾರ್ಕೆಟ್‍ಗೆ ತೆರಳಿದ್ದು, ಇಲ್ಲಿ ಪ್ಲಾಸ್ಟಿಕ್ ಯಾ ಹಣವನ್ನೂ ನೀಡದೆ ಅಪಮಾನಿಸಿದ್ದರು. ಇದನ್ನು ಪ್ರಶ್ನಿಸಲು ಹಸಿರು ಕ್ರಿಯಾ ಸೇನೆ ಕೋರ್ಡಿನೇಟರ್ ಹಾಗೂ ಪಂಚಾಯಿತಿ ಕಾರ್ಯದರ್ಶಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂಧರ್ಭ ಸೂಪರ್‍ಮಾರ್ಕೆಟ್ ನೌಕರರು ಹಲ್ಲೆಗೆ ಮುಂದಗಿದ್ದು, ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬದಿಯಡ್ಕ ಠಾಣೆಗೆ ಪಂಚಾಯಿತಿ ಕಾರ್ಯದರ್ಶಿ ದೂರು ನೀಡಿದ್ದಾರೆ.




