ಕುಂಬಳೆ: ಜೋಡು ನಾಟೆಕ್ಕಲ್ ವಿವೇಕಾನಂದ ನಗರ ವಿನಾಯಕ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್‍ನ 26ನೇ ವಾರ್ಷಿಕೋತ್ಸವ ಮತ್ತು 76ನೇ ಸ್ವಾತಂತ್ರೋತ್ಸವದ ಸಂಭ್ರಮಾಚರಣೆ ವಿವಿಧ ಕಲೆ, ಸಾಂಸ್ಕøತಿಕ ಮತ್ತು ಆಟೋಟ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಬೆಳಗ್ಗೆ 08.30 ಕ್ಕೆ ಕ್ಲಬ್ ನ ಅಧ್ಯಕ್ಷ ಮನೋಜ್ ಗಟ್ಟಿ ದಾಸರಹಳ್ಳಿ ಅವರು ಧ್ವಜಾರೋಹಣಗೈದು ಚಾಲನೆ ನೀಡಿದರು. ಕುಂಬಳೆ ಗ್ರಾಮ ಪಂಚಾಯತಿ ಸದಸ್ಯೆ ಪ್ರೇಮಲತಾ ಯಸ್ ಮತ್ತು ನಿವೃತ ಅಧ್ಯಾಪಕ ಅಶೋಕ್ ಮಾಸ್ತರ್ ಬಾಡೂರು ಮುಖ್ಯ ಅತಿಥಿಗಳಾಗಿದ್ದರು.
ಕೃಷಿ ಕಲೆ ಮತ್ತು ವಿವಿಧ ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಕುಂಬಳೆಯ ಖ್ಯಾತ ವೈದ್ಯ ಡಾ. ಸರ್ವೇಶ್ವರ್ ಭಟ್ ಕುಂಬಳೆ, ದೈವನಾರ್ಥಕ ಐತಪ್ಪ ಆರಿಕ್ಕಾಡಿ, ಹೈನುಗಾರಿಕೋದ್ಯಮಿ ವಿದ್ಯಾ ಬಿ. ಭಟ್ ಕೋಣಮ್ಮೆ ಮತ್ತು ಸ್ಥಳೀಯ ಪ್ರಗತಿಪರ ಕೃಷಿಕ ಮುಹಮ್ಮದ್ ಹಾರಿಸ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಹರಿಪ್ರಸಾದ್ ಭಟ್ ಸ್ವಾಗತಿಸಿ, ಪ್ರವೀಣ್ ಹೆಗ್ಡೆ ವಂದಿಸಿದರು.




.jpg)
