HEALTH TIPS

ಕೊಂಡೆವೂರಿನಲ್ಲಿ ಸೇನೆ ಸೇರುವ ತರಬೇತಿ ಶಿಬಿರ: ಅರ್ಜಿ ಆಹ್ವಾನ

                 ಉಪ್ಪಳ: ಭಾರತ ಸರ್ಕಾರದ ಸೇನೆ ಸೇರಬಯಸುವ ಅಭ್ಯರ್ಥಿಗಳಿಗೆ 2023ರ ತರಬೇತಿ ಶಿಬಿರವನ್ನು ಸೆ.1 ರಿಂದ ಕೊಂಡೆವೂರು ಮಠದಲ್ಲಿ ಆಯೋಜಿಸಿದ್ದು ಅರ್ಹ ಶಿಬಿರಾರ್ಥಿಗಳ ಆಯ್ಕೆ ಆ.27. ರಂದು ಬೆಳಿಗ್ಗೆ 8.30ಕ್ಕೆ ನಡೆಯಲಿದೆ. ಭಾರತೀಯ ಸೇನೆಯ ಬಿ.ಎಸ್.ಎಫ್, ಆರ್ ಪೋರ್ಸ್, ನೇವಿ, ಸಿ.ಆರ್.ಪಿ.ಎಫ್, ಐಟಿಬಿಪಿ, ಸಿ.ಐ.ಎಸ್.ಎಫ್, ಅಸ್ಸಾಂ ರೈಫಲ್ಸ್ ಮತ್ತು ಎಲ್ಲ ಪ್ಯಾರಾ ಮಿಲಿಟರಿ ವಿಭಾಗಗಳಿಗೆ ಸೇರುವವರಿಗೆ ಈ ತರಬೇತಿ ಶಿಬಿರ ಆಯೋಜಿಸಿದೆ. 18 ರಿಂದ 23 ವರ್ಷ ವಯೋಮಿತಿಯ 16 ಸೆ.ಮೀಟರ್ ಗಿಂತ ಉದ್ದ ಇರುವ 50 ಕೆಜಿ ಗಿಂತ ಹೆಚ್ಚಿನ ತೂಕ ಇರುವವರು ತರಬೇತಿಗೆ ಅರ್ಹರು. ಆಸಕ್ತರು ಆ.27 ರಂದು ಬೆ.8.30 ರ ಮೊದಲು ದಾಖಲೆ ಪತ್ರಗಳೊಂದಿಗೆ ಉಪ್ಪಳದ ಕೊಂಡೆವೂರು ಮಠದಲ್ಲಿ ಹಾಜರಿರಬೇಕು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತ ಅಭ್ಯರ್ಥಿಗಳು ಆಧಾರ್ ಕಾರ್ಡ್, ಅರ್ಹತಾ ಪ್ರಮಾಣ ಪತ್ರ, ಕ್ರೀಡೆ/ಎನ್.ಸಿ.ಸಿ ಇತ್ಯಾದಿ ಸರ್ಟಿಫಿಕೇಟ್ ಇದ್ದರೆ ತರಬೇಕಾಗಿದೆ. ಜೊತೆಗೆ ಟ್ರಾಕ್ ಸೂಟ್, ಸ್ಪೋಟ್ರ್ಸ್ ಶೂ, ಜೆರ್ಸಿ, ಶೋಟ್ರ್ಸ್ ಗಳನ್ನು ಧರಿಸುವ ವ್ಯವಸ್ಥೆ ಮಾಡಿರಬೇಕು. ಹೆಚ್ಚಿನ ಮಾಹಿತಿಗಾಗಿ 9496857851 ಮೊಬೈಲ್ ಸಂಪರ್ಕಿಸಲು ಕೋರಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries