ತಿರುವನಂತಪುರಂ: ಗಣೇಶ ದೇವರ ಬಗ್ಗೆ ಅವಹೇಳನ ನೀಡಿದ ಸ್ಪೀಕರ್ ಶಂಸೀರ್ ವಿರುದ್ದ ಹಿಂದೂ ಸಮುದಾಯ ವಿರೋಧಿಸುತ್ತಿರುವ ಬೆನ್ನಲ್ಲೇ ಸಿಪಿಎಂ ತನ್ನ ನಿಲುವು ಬದಲಿಸಿದೆ. ಗಣಪತಿ ಮಿಥ್ ಎಂದು ನಾನಾಗಲಿ, ಶಂಸೀರ್ ಆಗಲಿ ಹೇಳಿಲ್ಲ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ದೆಹಲಿಯಲ್ಲಿ ತಿಳಿಸಿದ್ದಾರೆ. ಗಣೇಶ ಮತ್ತು ಅಲ್ಲಾ ಎಲ್ಲಾ ನಂಬಿಕೆಯ ಭಾಗವಾಗಿದೆ. ‘ಪರಶುರಾಮನು ಕೊಡಲಿಯಿಂದ ಕೇರಳವನ್ನು ಸೃಷ್ಟಿಸಿದನು’ ಎಂದು ಪುರಾಣ ಹೇಳುತ್ತದೆ.
ಎಲ್ಲಾ ನಂಬಿಕೆಯ ಧರ್ಮದ ಭಾಗವಾಗಿದೆ. ಗಣೇಶನೂ ಅμÉ್ಟೀ. ಹಾಗಾದರೆ ನಾವು ಅದನ್ನು ಪುರಾಣ ಎಂದು ಏಕೆ ಹೇಳುತ್ತೇವೆ. ಆಗುತ್ತಿರುವುದೆಲ್ಲ ಸುಳ್ಳು ಪ್ರಚಾರ ಎಂದು ಗೋವಿಂದನ್ ಹೇಳಿದರು. ಗೋವಿಂದನ್ ಅವರ 50 ನಿಮಿಷಗಳ ಸುದೀರ್ಘ ಸುದ್ದಿಗೋಷ್ಠಿಯಲ್ಲಿ ಶಂಸೀರ್ ಅವರ ಮಾತಿಗೆ ಕತ್ತರಿ ಹಾಕುವ ಮೂಲಕ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದರು. ಎನ್ ಎಸ್ ಎಸ್ ನಾಮಜಪ ಮೆರವಣಿಗೆ ವೇಳೆ ಕಾನೂನು ಪ್ರಕಾರ ಪ್ರಕರಣ ದಾಖಲಾಗಿದೆ ಎಂದು ಗೋವಿಂದನ್ ತಿಳಿಸಿದರು.





