HEALTH TIPS

ಕೆನಡಾದಲ್ಲಿ ಬಂಧಿತನಾಗಿದ್ದ ಕೇರಳೀಯ ಇಸ್ಲಾಮಿಕ್ ಭಯೋತ್ಪಾದಕ ಚೆನಪರಂಬಿಲ್ ಬಶೀರ್ ನನ್ನು ಭಾರತಕ್ಕೆ ಕರೆತಂದಿರುವ ಸುಳಿವು: ಕೇರಳದಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಚಟುವಟಿಕೆಗಳನ್ನು ಆರಂಭಿಸಿದ ಭಯೋತ್ಪಾದಕನ ಬಂಧನ

                 ತ್ರಿಶೂರ್: ಕೆನಡಾದಲ್ಲಿ ಬಂಧಿತನಾಗಿದ್ದ ಇಸ್ಲಾಮಿಕ್ ಭಯೋತ್ಪಾದಕ, ಆಲುವಾ ಕಪ್ರಸೇರಿ ಮೂಲದ ಚೆನಪರಂಬಿಲ್ ಬಶೀರ್ (62) ನನ್ನು ಭಾರತಕ್ಕೆ ಕರೆತರಲಾಗಿದೆ ಎಂದು ತಿಳಿದುಬಂದಿದೆ.

             ಬಶೀರ್ ಮುಂಬೈ ಸ್ಫೋಟ ಪ್ರಕರಣದ ಆರೋಪಿ. ಬಶೀರ್ ಸಿಮಿಯ ಮಾಜಿ ನಾಯಕ. ಆತನ ನೇತೃತ್ವದಲ್ಲಿಯೇ ಕೇರಳದಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಚಟುವಟಿಕೆಗಳು ಪ್ರಾರಂಭವಾಗಿದ್ದವು ಎಂದು ತನಿಖಾ ಸಂಸ್ಥೆಗಳು ಹೇಳುತ್ತವೆ.

                  ಇಂಟರ್ ಪೋಲ್ ವಾಂಟೆಡ್ ಕ್ರಿಮಿನಲ್ ಲಿಸ್ಟ್‍ನಿಂದ ಬಶೀರ್ ನ ಪೋಟೋ ಕೈಬಿಟ್ಟಿರುವುದು ಈ ಅನುಮಾನವನ್ನು ಬಲಗೊಳಿಸಿದೆ. ಆರೋಪಿ ಸಿಕ್ಕಿಬಿದ್ದರೆ ಅಥವಾ ಸತ್ತಾಗ ಮಾತ್ರ ಡಿಲಿಸ್ಟ್ ಮಾಡಲಾಗುತ್ತದೆ.

          ಸಿಬಿಐ ಮೂಲಕ ಪ್ರಕರಣದಲ್ಲಿ ಇಂಟರ್ ಪೋಲ್ ಮಧ್ಯಪ್ರವೇಶಿಸಿ ಬಶೀರ್‍ನನ್ನು ಟೊರೊಂಟೊ ವಿಮಾನ ನಿಲ್ದಾಣದಿಂದ ಕಸ್ಟಡಿಗೆ ತೆಗೆದುಕೊಂಡಿದೆ. ಬಶೀರ್ ಬಂಧನದ ಬಳಿಕ ಆತನ ಸಹೋದರಿಯ ರಕ್ತವನ್ನು ಸಂಗ್ರಹಿಸಿ ಡಿಎನ್ ಎ ಪರೀಕ್ಷೆ ನಡೆಸಲಾಗಿದೆ.

          ಈತ ಕೆನಡಾದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಕೇಂದ್ರೀಯ ಸಂಸ್ಥೆಗಳು ಇಂಟರ್ ಪೋಲ್ ನೆರವು ಕೋರಿದ್ದವು. 12 ಜನರ ಸಾವಿಗೆ ಕಾರಣವಾದ ಮುಲುಂಡ್ ಸ್ಫೋಟ ಪ್ರಕರಣದಲ್ಲಿ ಇಂಟರ್ ಪೋಲ್ ಬಶೀರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು.

            ಬಶೀರ್ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಪಡೆದು ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಕೆಲಸ ಮಾಡಿದ್ದ. ಆತ 1980 ರ ದಶಕದ ಉತ್ತರಾರ್ಧದಲ್ಲಿ ಸಿಮಿಯ ರಾಷ್ಟ್ರೀಯ ಅಧ್ಯಕ್ಷನಾಗಿದ್ದ. ಇಂಡಿಯನ್ ಮುಜಾಹಿದ್ದೀನ್‍ನ ಚಟುವಟಿಕೆಗಳ ಕುರಿತು 2009 ರ ತನಿಖೆಯ ಸಮಯದಲ್ಲಿ ಈತನ ಹೆಸರು ಕೇಳಿಬಂದಿತು. ಬಶೀರ್ ವಿದೇಶದಲ್ಲಿದ್ದುಕೊಂಡು ಭಾರತದ ವಿವಿಧ ಭಯೋತ್ಪಾದಕ ಸಂಘಟನೆಗಳ ಚಟುವಟಿಕೆಗಳನ್ನು ಸಮನ್ವಯಗೊಳಿಸುತ್ತಿದ್ದ ಎಂದು ಗುಪ್ತಚರ ಸಂಸ್ಥೆಗಳು ನಂಬಿವೆ.

                  ಆತ  ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ ಐ) ನೊಂದಿಗೆ ನಿಕಟ ಸಂಬಂಧ ಹೊಂದಿದ್ದ ಮತ್ತು ಲಷ್ಕರ್-ಎ-ತೈಬಾ ಸೇರಿದಂತೆ ವಿವಿಧ ಸಂಘಟನೆಗಳ ಅಡಿಯಲ್ಲಿ ಭಯೋತ್ಪಾದಕ ತರಬೇತಿಗಾಗಿ ಭಾರತದಿಂದ ಯುವಕರನ್ನು ನೇಮಿಸಿಕೊಳ್ಳುವಲ್ಲಿ ಸಕ್ರಿಯವಾಗಿ ಆಸಕ್ತಿ ಹೊಂದಿದ್ದ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries