ಕಾಸರಗೋಡು: ಮೀನುಗಾರಿಕಾ ವಿಭಾಗದಲ್ಲಿ ಒಳಪಟ್ಟ ಉದ್ಯೋಗಾಕಾಂಕ್ಷಿಗಳಿಗಾಗಿ ಕೇರಳ ನಾಲೇಜ್ ಇಕಾನಮಿ ಮಿಷನ್ ಮೀನುಗಾರಿಕಾ ಇಲಾಖೆ ಸಹಯೋಗದೊಂದಿಗೆ ನಡೆಸುವ ಕಾರ್ಮಿಕ ಕರಾವಳಿ ಯೋಜನೆಯ ಉದುಮ ಮಂಡಲದ ಸ್ವಾಗತ ಸಮಿತಿ ರಚನಾ ಸಭೆ ಪಳ್ಳಿಕ್ಕರ ಸಿಡಿಎಸ್ ಸಭಾಂಗಣದಲ್ಲಿ ಜರುಗಿತು.
ಶಾಸಕ ಸಿ.ಎಚ್ ಕುಞಂಬು ಸಮಾರಂಭ ಉದ್ಘಾಟಿಸಿದರು. ಪಳ್ಳಿಕ್ಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕುಮಾರನ್ ಅಧ್ಯಕ್ಷತೆ ವಹಿಸಿದ್ದರು. ಉದುಮ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಲಕ್ಷ್ಮಿ, ಕುತ್ತಿಕೋಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮುರಳಿ ಪಯ್ಯಂಗಾನಂ, ಚೆಮ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಫೈಜಾ ಅಬೂಬಕ್ಕರ್, ಮೀನುಗಾರಿಕಾ ವಿಸ್ತರಣಾಧಿಕಾರಿ ಅರುಣೇಂದು ರಾಮಕೃಷ್ಣನ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಕೆ.ಆರ್.ಕಾವ್ಯ, ಸಮುದಾಯ ರಾಯಭಾರಿ ಪಿ.ವಿ.ಶರಣ್ಯ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಶಾಸಕ ಸಿ.ಎಚ್.ಕುಞಂಬು, ಉಪಾಧ್ಯಕ್ಷರಾಗಿ ಬ್ಲಾಕ್ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕುಟುಂಬಶ್ರೀ ಜಿಲ್ಲಾ ಮಿಷನ್ ಕೋರ್ಡಿನೇಟರ್ ಪ್ರಧಾನ ಸಂಚಾಲಕರಾಗಿರುವ ಸಮಿತಿ ರಚಿಸಲಾಗಿದೆ. ಕೇರಳ ನಾಲೆಡ್ಜ್ ಮಿಷನ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಮೀನುಗಾರಿಕೆ ಉಪನಿರ್ದೇಶಕರು, ಬ್ಲಾಕ್ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಸಿಡಿಎಸ್ ಅಧ್ಯಕ್ಷರು ಮತ್ತು ಸಮುದಾಯ ರಾಯಭಾರಿಗಳು ಸಮಿತಿಯ ಸಂಚಾಲಕರಾಗಿರುತ್ತರೆ.





