ಕಾಸರಗೋಡು: ಬ್ರಹ್ಮಶ್ರೀ ನಾರಾಯಣ ಗುರು ಜನ್ಮ ದಿನದ ಸಮಾರಂಭವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಬಿಲ್ಲವ ಸೇವಾ ಸಂಘ ಕಾಸರಗೋಡು ಇದರ ಸಭೆಯು ಕಾಸರಗೋಡು ಕರಂದಕ್ಕಾಡಿನ ಬಿಲ್ಲವ ಸೇವಾ ಮಂದಿರದಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಎ. ಕೇಶವ ಅಧ್ಯಕ್ಷತೆ ವಹಿಸಿದ್ದರು. ಇ ಶಮಧಬ್ ಆಗಸ್ಟ್ 31 ರಂದು ಶ್ರೀ ನಾರಾಯಣ ಗುರು ಜನ್ಮದಿನವನ್ನು ವಿವಿಧ ಕಾರ್ಯಖ್ರಮಗಳೊಂದಿಗೆ ಆಚರಿಸಲು ತೀರ್ಮಾನಿಸಲಾಯಿತು. ಗಣಹೋಮದೊಂದಿಗೆ ಆರಂಭಗೊಳ್ಳಲಿರುವ ಕಾರ್ಯಕ್ರಮ ನಂತರ ಭಜನೆ,ಗುರು ಪೂಜೆ ನಡೆಯಲಿರುವುದು.
ಪದಾಧಿಕಾರಿಗಳಾದ ಜಯಶೀಲ, ಮೈಂದಪ್ಪ, ರಘು ಮೀಪುಗುರಿ, ಶಮ್ಮಿ ಕುಮಾರ್, ಕಮಲಾಕ್ಷ, ಜಯಂತ, ಸಂತೋಷ್, ಹರಿಕಾಂತ್, ಚಂದ್ರಕಲಾ, ಹರೀಶ್ ಕೆ ಆರ್ ಉಪಸ್ಥಿತರಿದ್ದರು.
ಸಮಾಲೋಚನಾ ಸಭೆಯಲ್ಲಿ ಸಂಘಟನೆ ಮುಖ್ಯ ಕಾರ್ಯದರ್ಶಿ ಪ್ರೇಮ್ ಜಿತ್ ಸ್ವಾಗತಿಸಿ ಕಾರ್ಯಕ್ರಮದ ವಿಷಯವನ್ನು ಮಂಡಿಸಿದರು. ಸಂಘದ ಕೋಶಧಿಕಾರಿ ಅಶೋಕ್ ವಂದಿಸಿದರು.


