ಕಾಸರಗೋಡು: ಜಿಲ್ಲಾಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಅ.15ರಂದು ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ನಡೆಯುವ ಪರೇಡ್‍ನಲ್ಲಿ ಸ್ಥಳೀಯಾಡಳಿತ ಮತ್ತು ಅಬಕಾರಿ ಖಾತೆ ಸಚಿವ ಎಂ.ಬಿ.ರಾಜೇಶ್ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸುವರು.
ಈ ಸಂದರ್ಭ ನಡೆಯುವ ಪಥಸಂಚಲನದಲ್ಲಿ ಪೆÇಲೀಸ್, ಅಬಕಾರಿ, ಎನ್‍ಸಿಸಿ, ಸ್ಕೌಟ್ ಆಂಡ್ ಗೈಡ್ಸ್ಯ್, ವಿದ್ಯಾರ್ಥಿ ಪೊಲೀಸ್ ಸೇರಿದಂತೆ ವಿವಿಧ ಪ್ಲಟೂನ್‍ಗಳು ಭಾಗವಹಿಸಲಿದೆ. ಬಳಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಕಲಾವಿದರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ.

