ಕುಂಬಳೆ : ಕುಂಬಳೆ ಪೊಲೀಸ್ ಠಾಣೆ ವಠಾರದಲ್ಲಿ ಭಾರಿ ನಾಗರಹಾವು ಹೆಡೆಯೆತ್ತಿ ನಿಲ್ಲುವ ಮೂಲಕ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಭೀತಿಗೆ ಕಾರಣವಾಯಿತು. ಠಾಣೆ ವಠಾರದಲ್ಲಿ ಪೊಲೀಸರು ವಶಪಡಿಸಿಕೊಂಡು ನಿಲುಗಡೆಗೊಳಿಸಲಾಗಿದ್ದ ವಾಹನಗಳ ತಳಭಾಗದಲ್ಲಿ ಹಾವು ಕಾಣಿಸಿಕೊಂಡಿದೆ.
ಯಾವುದೋ ಉರಗವೊಂದು ಸಂಚರಿಸುತ್ತಿರುವ ಬಗ್ಗೆ ಪೊಲೀಸರು ಸುಮ್ಮನಾಗಿದ್ದರೂ, ಅಲ್ಪ ಹೊತ್ತಿನಲ್ಲಿ ಬೃಹತ್ ಹೆಡೆಯೆತ್ತಿ ನಿಲ್ಲುವ ಮೂಲಕ ಭಯದ ವಾತಾವರಣ ಸೃಷ್ಟಿಸಿತ್ತು. ತಕ್ಷಣ ಪೊಲೀಸರು ಅರಣ್ಯ ಇಲಾಖೆಗೆ ನೀಡಿದ ಮಾಹಿತಿಯನ್ವಯ ಅಧಿಕಾರಿಗಳು ಉರಗ ಸೆರೆಹಿಡಿಯುವವರೊಂದಿಗೆ ಆಗಮಿಸಿ ನಾಗರಹಾವನ್ನು ಹಿಡಿದು ದೂರದ ಅರಣ್ಯದಲ್ಲಿ ಸುರಕ್ಷಿತವಾಗಿ ಬಿಟ್ಟುಬಂದಿದ್ದಾರೆ.

