ಕಾಸರಗೋಡು: ಚಿನ್ನದ ವ್ಯವಹಾರಕ್ಕೆ ಸಂಬಂಧಿಸಿ ತಂಡವೊಂದು ಯುವಕನನ್ನು ಅಪಹರಿಸಿದ್ದು, ತಕ್ಷಣ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳಿಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಣಂಗೂರು ನಿವಾಸಿಗಳಾದ ಅಸರುದ್ದೀನ್ (26) ಮತ್ತು ಖಾದರ್ (25) ಎಂಬವರು ಬಂಧಿತರು. ಕೂಡ್ಲು ಮೀಪುಗುರಿ ಗಲ್ಫ್ ಕ್ವಾರ್ಟರ್ಸ್‍ನ ಅಹಮ್ಮದ್ ಜಾಬೀರ್ (36)ನನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಇವರನ್ನು ಬಂಧಿಸಲಾಗಿದೆ.
ಅಹಮ್ಮದ್ ಜಾಬಿರ್ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಕಾರಿನಲ್ಲಿ ಬಂದ ತಂಡ ಬಲವಂತವಾಗಿ ಕಾರಿಗೇರಿಸಿ ಅಪಹರಿಸಿದ್ದರು. ಈ ಸಂದರ್ಭ ಅಹಮ್ಮದ್ ಜಾಬಿರ್ ಅವರ ಸ್ನೇಹಿತಗೆ ತಂಡ ಹಲ್ಲೆ ನಡೆಸಿ, ಅಲ್ಲೇ ಬಿಟ್ಟು ಹೋಗಿದ್ದರು. ಈ ಮಧ್ಯ ಅಹಮ್ಮದ್ ಜಾಬೀರ್‍ನ ತಾಯಿ ಕಾಸರಗೋಡು ನಗರ ಠಾಣೆಗೆ ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಅಹಮ್ಮದ್ ಜಾಬೀರ್‍ನನ್ನು ನಗರದ ಹೊಸ ಬಸ್ ನಿಲ್ದಾಣ ವಠಾರದಿಂದ ಪತ್ತೆಹಚ್ಚಿದ್ದರು. ಕಾಸರಗೋಡು ಪೆÇಲೀಸ್ ಇನ್ಸ್‍ಪೆಕ್ಟರ್ ಪಿ. ಅಜಿತ್ ಕುಮಾರ್‍ನ ನೇತೃತ್ವದ ಪೆÇಲೀಸರ ತಂಡ ಇವರನ್ನು ಬಂಧಿಸಿದೆ.
ಅಹಮ್ಮದ್ ಜಾಬೀರ್ ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗಷ್ಟೇ ಊರಿಗೆ ಹಿಂತಿರುಗಿದ್ದರು. ವಿದೇಶದಿಂದ ವಾಪಸಾಗುವ ಮಧ್ಯೆ ಜಾಬಿರ್ ಚಿನ್ನ ತಂದಿದ್ದು, ಈ ಚಿನ್ನದ ವ್ಯವಹಾರಕ್ಕೆ ಸಂಬಂಧಿಸಿ ತಂಡ ಜಾಬಿರ್‍ನನ್ನು ಅಪಹರಿಸಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.
ಆತಂಕಕ್ಕೆ ಕಾರಣವಾದ ರಕ್ತದ ಕಲೆ:
ಅಹಮ್ಮದ್ ಜಾಬೀರ್‍ನ ಅಪಹರಣ ಸಂದರ್ಭದಲ್ಲೇ ನಗರದ ಕೋಟೆಕಣಿಯಲ್ಲಿ ರಸ್ತೆಯಲ್ಲಿ ಕೆಲವೊಂದು ರಕ್ತದ ಕಲೆಗಳೂ ಪತ್ತೆಯಾಗಿದ್ದು, ಇದು ಜನರಲ್ಲಿ ಮತ್ತಷ್ಟು ಅತಂಕಕ್ಕೂ ಕಾರಣವಾಗಿತ್ತು. ಈ ಬಗ್ಗೆ ಪೆÇಲೀಸರು ನಡೆಸಿದ ತನಿಖೆಯಲ್ಲಿ ಕೋಟೆಕಣಿ ರಸ್ತೆಯಲ್ಲಿ ಕಂಡುಬಂದಿದ್ದ ರಕ್ತದ ಕಲೆಗೂ ಅಹಮ್ಮದ್ ಜಾಬೀರ್ ಅಪಹರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದರು.






