ಮಂಜೇಶ್ವರ: ವಿಶ್ವ ಹಿಂದೂ ಪರಿಷತ್ ಮೀಂಜ ಖಂಡ ಸಮಿತಿ ಆಶ್ರಯದಲ್ಲಿ ರಾಮಾಯಣ ಮಾಸಾಚರಣೆ ಪ್ರಯುಕ್ತ ಭಜನಾ ಸತ್ಸಂಗ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.
ಗಣಪತಿ ಭಟ್ ಅಮ್ಮೆನಡ್ಕ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧರ್ಮ ಜಾಗರಣ್ ಪ್ರಮುಖ್ ತಿಮ್ಮಪ್ಪ ಮೈತಾಳ್ ಶುಭ ಹಾರೈಸಿದರು. ವಿ.ಹಿಂ.ಪ. ಮಂಜೇಶ್ವರ ಪ್ರಖಂಡ ಸಹ ಕಾರ್ಯದರ್ಶಿ ರಂಜಿತ್ ಕೋಡಿಬೈಲು, ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಸೌಮ್ಯ ಪ್ರಕಾಶ್, ಪ್ರೀತಿ ರೈ ಉಪಸ್ಥಿತರಿದ್ದರು. ಪರಮೇಶ್ವರಿ ಶಂಕರನಾರಾಯಣ ಭಟ್, ಚಿಗುರುಪಾದೆ ಇವರ ನೇತೃತ್ವದಲ್ಲಿ ಶ್ರೀಮದ್ ಭಗವದ್ಗೀತೆ ಹನ್ನೊಂದನೆಯ ಅಧ್ಯಾಯ ಪಾರಾಯಣ ಜರಗಿತು.

.jpg)
.jpg)
