ಕಾಸರಗೋಡು: ಕಾರುಣ್ಯ ಚಿಕಿತ್ಸೆ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳ ಮೂಲಕ ಯುವಕರು ಮತ್ತು ಹಿರಿಯರ ಕಣ್ಣೀರೊರೆಸುವ ಧೀಮಂತ ವ್ಯಕ್ತಿಯಾಗಿ ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಬಾಳಿ ಬದುಕಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಕೆ. ಫೈಸಲ್ ತಿಳಿಸಿದ್ದಾರೆ.
ಅವರು ಕೇರಳ ಎನ್‍ಜಿಒ ಅಸೋಸಿಯೇಷನ್‍ನ ಜಿಲ್ಲಾಸಮಿತಿಯ ಆಶ್ರಯದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಊಮನ್‍ಚಾಂಡಿ ಸಂಸ್ಮರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಕಾಸರಗೋಡಿನ ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡಿದ ವ್ಯಕ್ತಿತ್ವ ಅವರದ್ದಾಗಿತ್ತು. ಉದ್ಯೋಗಿಗಳ ಎಲ್ಲ ಹಕ್ಕುಗಳನ್ನು ಕಾಯ್ದಿರಿಸುವುದರ ಜತೆಗೆ ಸರ್ಕಾರದಿಂದ ಲಭಿಸಬೇಕದ ವಿವಿಧ ಪ್ರಯೋಜನಗಳು ಸಮಯೋಚಿತವಾಗಿ ದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಎ.ಟಿ.ಶಶಿ ಅಧ್ಯಕ್ಷತೆ ವಹಿಸಿದ್ದರು. ಕೆ ಸಿ ಸುಜಿತ್ ಕುಮಾರ್, ಸುರೇಶ್ ಪೆರಿಯಂಗನಂ, ಕೆ ಅಶೋಕ್ ಕುಮಾರ್, ಕೆ ಎಂ ಜಯಪ್ರಕಾಶ್, ವತ್ಸಲಕೃಷ್ಣನ್, ವಿಟಿಪಿ ರಾಜೇಶ್, ಶಶಿ ಕಂಪಲೂರು ಎಂ.ಟಿಪ್ರಸೀದಾ, ಎಸ್ ಎಂ ರಜಿನಿ, ಎಂ ಶ್ರೀನಿವಾಸನ್, ವಿ ಎಂ ರಾಜೇಶ್, ಬ್ರಿಜೇಶ್ ಪೈನೆ, ಗಿರೀಶ್ ಆನಪೆಟ್ಟಿ, ಮಾಧವನ್ ನಂಬಿಯಾರ್, ನಿಲ್ಸನ್‍ಥಾಮಸ್, ಪಿ.ಕುಞÂಕೃಷ್ಣನ್, ವಿಜಯಕುಮಾರನ್ ನಾಯರ್‍ಬಿಂದು ಕೆ ಮೊದಲದವರು ಉಪಸ್ಥಿತರಿದ್ದರು.


