ನವದೆಹಲಿ: ಭಾರತೀಯ ದಂಡ ಸಂಹಿತೆ (Indian Penal Code), ದಂಡ ಪ್ರಕ್ರಿಯಾ ಸಂಹಿತೆ (CrPc) ಭಾರತ ಸಾಕ್ಷ್ಯ ಅಧಿನಿಯಮ (Evidence Act)ಗೆ ಬದಲಾಗಿ ಹೊಸ ಕಾನೂನು ರೂಪಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದೆ.
0
samarasasudhi
ಆಗಸ್ಟ್ 11, 2023
ನವದೆಹಲಿ: ಭಾರತೀಯ ದಂಡ ಸಂಹಿತೆ (Indian Penal Code), ದಂಡ ಪ್ರಕ್ರಿಯಾ ಸಂಹಿತೆ (CrPc) ಭಾರತ ಸಾಕ್ಷ್ಯ ಅಧಿನಿಯಮ (Evidence Act)ಗೆ ಬದಲಾಗಿ ಹೊಸ ಕಾನೂನು ರೂಪಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದೆ.
ಹೊಸ ನಿಯಮದಲ್ಲಿ ಇದೇ ಮೊದಲ ಬಾರಿಗೆ ಶಿಕ್ಷೆಯಾಗಿ ಸಮುದಾಯ ಸೇವೆಯನ್ನು ಸೇರ್ಪಡೆ ಮಾಡಲಾಗಿದೆ.
ಭಾರತೀಯ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ ಹಾಗೂ ಭಾರತ ಸಾಕ್ಷ್ಯ ಅಧಿನಿಯಮಗಳು ಕ್ರಮವಾಗಿ ಭಾರತೀಯ ನ್ಯಾಯ ಸಂಹಿತೆ 2023, ಬದಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಹಾಗೂ ಭಾರತೀಯ ಸಾಕ್ಷ್ಯಾ ಕಾನೂನು ಆಗಿ ಬದಲಾಗಲಿದೆ.
ಈ ಮೂರೂ ಮಸೂದೆಗಳನ್ನು ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದರು.
ಸಣ್ಣಪುಟ್ಟ ಅಪರಾಧಗಳಿಗೆ ಸಮುದಾಯ ಸೇವೆಯನ್ನು ಶಿಕ್ಷೆಯಾಗಿ ನೀಡುವ ಪ್ರಸ್ತಾಪ ಭಾರತೀಯ ನ್ಯಾಯ ಸಂಹಿತೆಯಲ್ಲಿದೆ. ಮಹಿಳೆಯರ ಹಾಗೂ ಮಕ್ಕಳ ಮೇಲಿನ ಅಪರಾಧಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.