ಕಾಸರಗೋಡು: ನಗರದ ಎಸ್‍ವಿಟಿ ರಸ್ತೆಯ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮೀ ವೃಂದಾವನ ಸೇವಾ ಸಮಿತಿ ವತಿಯಿಂದ ಶ್ರೀರಾಘವೇಂದ್ರ ಗುರುಸಾರ್ವಭೌಮ ಅವರ 352ನೇ ಆರಾಧನಾ ಮಹೋತ್ಸವ ಸೆ. 1ರಂದು ಜರುಗಲಿದೆ.
ಬೆಳಗ್ಗೆ 7ಕ್ಕೆ ಗಣಪತಿ ಹವನ, ಪಂಚಾಮೃತಾಭಿಷೇಕ, ವಿಷ್ಣು ಸಹಸ್ರನಾಮ, ಭಜನೆ, ಕೀರ್ತಿಶೇಷ ಮಧೂರು ಪದ್ಮನಾಭ ಸರಳಾಯ ಅವರ ಶಿಷ್ಯವೃಂದದಿಂದ ಗುರುಸಂಸ್ಮರಣಾ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ವಿದ್ವಾನ್ ಪಾಂಡುರಂಗ ಪಟ್ಟಾಭಿರಾಮ ಪಂಡಿತ್ ಅವರ ಹಾಡುಗಾರಿಕೆ ನಡೆಯುವುದು.
ಮಧ್ಯಾಹ್ನ 1.30ರಿಂದ ಮಧೂರು ಶ್ರೀ ಧನ್ವಂತರಿ ಯಕ್ಷಗಾನ ಕಲಾಸಂಘದಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 5ಕ್ಕೆ ಸಾರ್ವಜನಿಕ ಸತ್ಯನಾರಾಯಣಪೂಜೆ, 7.30ಕ್ಕೆ ಮಹಾಪೂಜೆ, ರಾತ್ರಿ 8ಕ್ಕೆ ವಿಶೇಷ ಹೂವಿನ ಪೂಜೆ, ರಂಗಪೂಜೆ ನಡೆಯಲಿರುವುದು.
ಕುಂಟಾರು ಕ್ಷೇತ್ರದಲ್ಲಿ ಆರಾಧನೆ:
ಮುಳ್ಳೇರಿಯ ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ಕ್ಷೇತ್ರದಲ್ಲಿ ಶ್ರೀ ಗುರು ರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವ ಸೆ.1ರಂದುವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಗ್ಗೆ ಗಣಪತಿಹೋಮ, ದೇವತಾ ಪ್ರಾರ್ಥನೆ, ಪಾದುಕಾ ಪ್ರತಿಷ್ಠೆ, 9ರಿಂದ ಪಾದಪೂಜೆ, ತುಳಸಿ ಅರ್ಚನೆ, 10ರಿಂದ ಅರವಿಂದ ಆಚಾರ್ಯ ಮತ್ತು ಬಳಗದವರಿಂದ ಭಕ್ತಿಗಾನ, 2ರಿಂದ ದಾಮೋದರ ಮಾಸ್ಟರ್ ಮತ್ತು ಬಳಗದವರಿಂದ ಭಜನಾಮೃತ, 3.30ಕ್ಕೆ ಶ್ರೀಹರಿಪ್ರಿಯಾ ಮಹಿಳಾ ಮಹಿಳಾ ಭಜನಾ ಮಂಡಳಿಯವರಿಂದ ಭಜನಾಮೃತ, 5ರಿಂದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರಿಂದ ಯಕ್ಷಗಾನ ಬಯಲಾಟ, ರಾತ್ರಿ 9ಕ್ಕೆ ಮಹಾಪೂಜೆ ನಡೆಯುವುದು.




.jpeg)
