HEALTH TIPS

ಬೆಡ್‌ಟೈಂನಲ್ಲಿ ಈ ಬದಲಾವಣೆ ಮಾಡಿದರೆ ಮೈ ತೂಕ ನಿಯಂತ್ರಿಸಬಹುದು

 ತೂಕ ಹೆಚ್ಚಾಗುತ್ತಿದೆ ಎಂಬುವುದು ತುಂಬಾ ಜನರ ಸಮಸ್ಯೆಯಾಗಿದೆ. ಮೈ ತೂಕ ಹೆಚ್ಚಾಗಲು ಜೀವನಶೈಲಿ ಪ್ರಮುಖ ಕಾರಣವಾಗಿದೆ. ಇನ್ನು ಕೆಲವರಿಗೆ ಆರೋಗ್ಯ ಸಮಸ್ಯೆಯಿಂದಾಗಿ ಕೂಡ ಮೈ ತೂಕ ಹೆಚ್ಚಾಗುವುದು. ಕೆಲವೊಂದು ಜೀವನಶೈಲಿ ಬದಲಾವಣೆಯಿಂದ ನಾವು ತೂಕ ಹೆಚ್ಚಾಗುವುದನ್ನು ನಿಯಂತ್ರಿಸಬಹುದು. ರಾತ್ರಿ ಹೊತ್ತಿನಲ್ಲಿ ನೀವು ಚಿಕ್ಕ ಬದಲಾವಣೆ ಮಾಡಿದರೆ ತೂಕ ನಿಯಂತ್ರಣಕ್ಕೆ ತುಂಬಾನೇ ಸಹಕಾರಿಯಾದೀತು ನೋಡಿ:

ಮದ್ಯಪಾನ ಮಾಡಬೇಡಿ
ಮದ್ಯಪಾನ ಮಾಡುವುದರಿಂದ ರಾತ್ರಿ ನಿದ್ದೆಗೆ ಭಂಗ ಉಂಟಾಗುವುದು. ನಿಮ್ಮ ಆರೋಗ್ಯಕ್ಕೆ 8 ಗಂಟೆ ನಿದ್ದೆ ಅವಶ್ಯಕ. ಮದ್ಯಪಾನ ಮಾಡಲಾರಂಭಿಸಿದರೆ ದೇಹದ ಕಡೆಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ, ಇದರಿಂದ ಮೈ ತೂಕ ಹೆಚ್ಚಾಗುವುದು.

ತುಂಬಾ ತಡವಾಗಿ ತಿನ್ನಬೇಡಿ
ನೀವು ಆಹಾರವನ್ನು 7 ಗಂಟೆಯ ಒಳಗಡೆ ಸೇವಿಸಿದರೆ ತುಂಬಾನೇ ಒಳ್ಳೆಯದು. ಮಲಗುವ ಸ್ವಲ್ಪ ಹೊತ್ತಿನ ಮುಂಚೆ ಆಹಾರ ಸೇವಿಸಿ ಮಲಗಿದರೆ ಇದರಿಂದ ಮೈ ತೂಕ ಹೆಚ್ಚಾಗುವುದು. ಅಲ್ಲದೆ ತಡವಾಗಿ ತಿನ್ನುವುದರಿಂದ ಚಯಪಚಯ ಕ್ರಿಯೆಯ ಮೇಲೆ ಪ್ರಭಾವ ಬೀರುವುದು. ಆದ್ದರಿಂದ ನೀವು ಲಘು ಆಹಾರವನ್ನು 7 ಗಂಟೆಯ ಒಳಗಡೆ ಸೇವಿಸಿ.

ಮಧ್ಯರಾತ್ರಿ ಹಸಿವು ಉಂಟಾದರೆ ಆರೋಗ್ಯಕರ ಸ್ನ್ಯಾಕ್ಸ್‌ ಸೇವಿಸಿ
ನಿಮಗೆ ಮಧ್ಯರಾತ್ರಿಯಲ್ಲಿ ಹಸಿವು ಉಂಟಾದರೆ ಆರೋಗ್ಯಕರ ಸ್ನ್ಯಾಕ್ಸ್ ಅಂದರೆ ತರಕಾರಿ ಅಥವಾ ಡ್ರೈ ಫ್ರೂಟ್ಸ್ ಸೇವಿಸಿ, ಇದರಿಂದ ಹಸಿವು ನಿಯಂತ್ರಿಸುವುದು ಮಾತ್ರವಲ್ಲ ಮೈ ತೂಕವನ್ನು ಕೂಡ ನಿಯಂತ್ರಿಸಬಹುದು.

ಮಲಗುವ ಮುಂಚೆ ಸ್ವಲ್ಪ ಧ್ಯಾನ ಮಾಡಿ
ಮಾನಸಿಕ ಒತ್ತಡ ಕೂಡ ಮೈ ತೂಕವನ್ನು ಹೆಚ್ಚಿಸುತ್ತದೆ, ಆದ್ದರಿಂದ ಮಲಗುವ ಮುಂಚೆ ಧ್ಯಾನ ಮಾಡಿ, ಇದರಿಂದ ಮಾನಸಿಕ ಒತ್ತಡ ತುಂಬಾನೇ ಕಡಿಮೆಯಾಗುವುದು.
ಇದರ ಜೊತೆಗೆ ಈ ಸಿಂಪಲ್‌ ಟಿಪ್ಸ್ ಅನುಸರಿಸಿ
* ನೀವು ಪ್ರೊಟೀನ್, ಕೊಬ್ಬಿನಂಶ, ತರಕಾರಿಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ
ನೀವು ತೂಕ ಇಳಿಕೆಗೆ ಆಹಾರವನ್ನು ಬಿಟ್ಟು ಡಯಟ್ ಮಾಡುವುದು ಸರಿಯಲ್ಲ, ಬದಲಿಗೆ ಆಹಾರವನ್ನು ಬ್ಯಾಲೆನ್ಸ್ ಮಾಡಬೇಕು. ನಿಮ್ಮ ಆಹಾರದಲ್ಲಿ ಆರೋಗ್ಯಕರ ಕೊಬ್ಬಿನಂಶ ಇರಬೇಕು. ಪ್ರೊಟೀನ್‌ ಇರುವ ಆಹಾರ ಸೇವಿಸಿ, ಅಲ್ಲದೆ ನಿಮ್ಮ ಆಹಾರದಲ್ಲಿ ನಾರಿನಂಶ ಅಧಿಕವಿರಲಿ.
ಈ ಕೊಬ್ಬಿನಂಶ ನಿಮ್ಮ ಆಹಾರಕ್ರಮದಲ್ಲಿ ಯಾವುದೇ ಭಯವಿಲ್ಲದೆ ಸೇರಿಸಬಹುದು
ಬಾದಾಮಿ
ಸೂರ್ಯಕಾಂತಿ ಬೀಜ
ಆಲೀವ್‌
ಆಲೀವ್ ಎಣ್ಣೆ
ಬೆಣ್ಣೆಹಣ್ಣು
ತೆಂಗಿನೆಣ್ಣೆ
ಬೆಣ್ಣೆ

ಯೋಚಿಸಿ ಆಹಾರ ತೆಗೆದುಕೊಳ್ಳಿ
ಹಸಿವು ಆಯ್ತು ಅಂತ ತಿನ್ನುವುದಕ್ಕೂ ಆಸೆಯಾಯ್ತು ಅಂತ ತಿನ್ನುವುದಕ್ಕೂ ವ್ಯತ್ಯಾಸವಿದೆ. ಆದ್ದರಿಂದ ನೀವು ಅಳತೆಮೀರಿ ತಿನ್ನುವುದಕ್ಕೆ ಕಡಿವಾಣ ಹಾಕಬೇಕಾಗಿದೆ.
* ಆಹಾರವನ್ನು ನಿಧಾನಕ್ಕೆ ಜಗಿದು ತಿನ್ನಿ.
* ನಿಮ್ಮ ಆಹಾರದಲ್ಲಿ ಕಾರ್ಬ್ಸ್ ಕಡಿಮೆ ಇರಲಿ, ನಾರಿನಂಶ ಅಧಿಕವಿರಲಿ.

ಸಾಕಷ್ಟು ನೀರು ಕುಡಿಯಿರಿ
ನೀವು ಸಾಕಷ್ಟು ನೀರು ಕುಡಿಯಿರಿ. ಅದರಲ್ಲೂ ಊಟಕ್ಕೆ ಮೊದಲು ನೀರು ಕುಡಿಯುವುದರಿಂದ ಆಹಾರ ತೆಗೆದುಕೊಳ್ಳುವುದರ ಪ್ರಮಾಣ ಕಡಿಮೆಯಾಗುವುದು.

ನಿದ್ದೆ ಸರಿಯಾಗಿ ಆಗಬೇಕು
ನೀವು ನಿದ್ದೆ ಚೆನ್ನಾಗಿ ಮಾಡಬೇಕು, ದಿನದಲ್ಲಿ 8 ಗಂಟೆ ನಿದ್ದೆ ಅವಶ್ಯಕ, ನಿದ್ದೆ ಕಡಿಮೆಯಾದರೆ ಮೈ ತೂಕದಲ್ಲಿ ವ್ಯತ್ಯಾಸ ಉಂಟಾಗುವುದು.

ಈ ಜೀವನ ಶೈಲಿ ಜೊತೆಗೆ ವ್ಯಾಯಾಮ ಮಾಡಿ
ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡುವುದರ ಜೊತೆಗೆ ದಿನಾ ಅರ್ಧ ಗಂಟೆ ವ್ಯಾಯಾಮ ಮಾಡಿ. ವ್ಯಾಯಾಮ ಅಂದರೆ ಜಿಮ್‌ಗೇ ಹೋಗಿ ಮಾಡಬೇಕೆಂದಿಲ್ಲ, ವಾಕ್ ಮಾಡಿದರು ಸಾಕು. ಇಷ್ಟು ಮಾಡಿದರೆ ಮೈ ತೂಕ ನೀವು ಬಯಸಿದಂತೆ ನಿಯಂತ್ರಣಕ್ಕೆ ಬರುತ್ತದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries