ಬದಿಯಡ್ಕ: ಶ್ರೀ ಎಡನೀರು ಮಠದ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ತೃತೀಯ ವಾರ್ಷಿಕ ಆರಾಧನೆಯ ಸಂದರ್ಭ ಭಾನುವಾರ ಬೆಳಗ್ಗೆ ವಿದ್ವಾನ್ ಶಂಕರನ್ ನಂಬೂದಿರಿ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು.
ವೆಂಕಟ್ರಮಣ ಪೋತಿ ನಾಗರಕೋಯಿಲ್ ಅವರ ಸೇವಾಕರ್ತರಾಗಿ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿದ್ದರು. ವಯಲಿನ್‍ನಲ್ಲಿ ವಿದ್ವಾನ್ ರಂಜಿತ್ ಮಾಂಞೂರ್, ಮೃದಂಗದಲ್ಲಿ ವಿದ್ವಾನ್ ಚೇರ್ತಲ ಜಿ.ಕೃಷ್ಣಕುಮಾರ್, ಘಟಂನಲ್ಲಿ ವಿದ್ವಾನ್ ಉಣ್ಣಿಕೃಷ್ಣನ್ ಮಾಂಞೂರ್ ಜೊತೆಗೂಡಿ ವೇದಿಕೆಯಲ್ಲಿ ಗಾನಮಾಧುರ್ಯ ಉಣಬಡಿಸಿದರು.


