HEALTH TIPS

ಮಂಜೇಶ್ವರ ಶಾಸಕರ ನಿರಂತರ ವಿದೇಶ ಪ್ರವಾಸ ಮಂಡಲದ ಯಾವ ಅಭಿವೃದ್ಧಿಗಾಗಿ?: ಬಿಜೆಪಿ ಪ್ರಶ್ನೆ

           ಮಂಜೇಶ್ವರ: ಅಭಿವೃದ್ಧಿಯಲ್ಲಿ ಅತ್ಯಂತ ಹಿನ್ನಡೆಯಲ್ಲಿರುವ, ಮೂಲಭೂತ ಸೌಕರ್ಯ ಗಳಿಗೆ ಕರ್ನಾಟಕವನ್ನೇ ಆಶ್ರಯಿಸಿರುವ, ವಿಧ್ಯಾಭ್ಯಾಸ, ಉದ್ಯೋಗ, ಆರೋಗ್ಯ, ವ್ಯವಹಾರ, ಎಲ್ಲದಕ್ಕೂ ಮಂಗಳೂರನ್ನೇ ಆಶ್ರಯಿಸುವ ಮಂಜೇಶ್ವರದ ಜನತೆಯ ಬವಣೆ ಬದಲಾವಣೆ ಯಾಕೆ ಸಾಧ್ಯವಾಗುತ್ತಿಲ್ಲ? ಮಂಜೇಶ್ವರ ಶಾಸಕರ ನಿರಂತರ ವಿದೇಶ ಯಾತ್ರೆ ಮಂಡಲದ ಯಾವ ಅಭಿವೃದ್ಧಿ ಗಾಗಿ ಎಂದು ಬಿಜೆಪಿ ಮಂಜೇಶ್ವರ ಮಂಡಲ ಪ್ರಶ್ನಿಸಿದೆ. 

            ಮಂಜೇಶ್ವರ ಶಾಸಕರು ಹೆಚ್ಚಿನ ಸಮಯ ವಿದೇಶದಲ್ಲೇ ಇರುವುದು ಯಾವ ಉದ್ದೇಶದಿಂದ, ಶಾಸಕರನ್ನು ಕಾಣಬೇಕಾದರೆ ನಾಡಿನ ಜನತೆಗೆ ವಿದೇಶಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಬಿಜೆಪಿ ಲೇವಡಿ ಮಾಡಿದೆ. 

             ಮಂಜೇಶ್ವರ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಮುಂದೆ ಸಾಗುತಿಲ್ಲ. ಮಂಡಲ ವ್ಯಾಪ್ತಿಯ ಕೆಲವು ಪಂಚಾಯತ್ ಗಳಲ್ಲಿ ಕಾರ್ಯದರ್ಶಿಗಳೇ ಇಲ್ಲದೆ 3 ತಿಂಗಳುಗಳಾಗುತ್ತಿದೆ. ಪೈವಳಿಕೆ ಪಂಚಾಯತ್ ನಲ್ಲಿ ಕಾರ್ಯದರ್ಶಿ, ಎ.ಇ, ಸಹ ಕಾರ್ಯದರ್ಶಿ, ಸಹಿತ ಅನೇಕ ಜವಾಬ್ದಾರಿಯುತ ನೌಕರರಿಲ್ಲದೆ, ಲೈಫ್, ರಸ್ತೆ ನಿರ್ಮಾಣ, ವಾರ್ಷಿಕ ಯೋಜನೆಗಳೆಲ್ಲ ಸ್ಥಗಿತ ಗೊಂಡಿದೆ. ಸರ್ಕಾರದ ಜೊತೆ ಮಾತುಕತೆ ನಡೆಸಿ ಶಾಸಕರಿಗೆ ಇದನ್ನೆಲ್ಲ ಪರಿಹಾರ ಮಾಡಲು ಆಗುತ್ತಿಲ್ಲ. ಮಂಡಲದಲ್ಲಿ ಯಾವುದೇ ನೂತನ ಯೋಜನೆಗಳು ಆಗುತ್ತಿಲ್ಲ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಗಂಭೀರ ಆರೋಪ ಮಾಡಿದೆ.

             ವಿಧಾನಸಭೆಯಲ್ಲಿ ಕೇವಲ ಆರ.ಎಸ್.ಎಸ್s ವಿರುದ್ಧ ಮಾತ್ರ ಆರೋಪಿಸುವ ಶಾಸಕರು ಯಾವ ಉದ್ದೇಶ ಸಾಧನೆಗಾಗಿ ನಿರಂತರ ವಿದೇಶ ಪ್ರವಾಸ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಬೇಕು. ತಿಂಗಳುಗಳ ಕಾಲದ ವಿದೇಶ ಯಾತ್ರೆ ಮಂಡಲದ ಅಭಿವೃದ್ಧಿಗಾಗಿಯೇ ಎಂದು ಬಿಜೆಪಿ ಕೇಳಿದೆ. ಕೇಂದ್ರ ಸರ್ಕಾರದ ಸರ್ವ ಶಿಕ್ಷ ಅಭಿಯಾನದ ಅಂಗವಾಗಿ ನಿರ್ಮಿಸಲಾದ ಶಾಲಾ ಕಟ್ಟಡ ಉದ್ಘಾಟಿಸುವುದು ಮಾತ್ರ ಶಾಸಕರ ಕೆಲಸವೇ? ಹೊಸಂಗಡಿಯ ಟ್ರಾಫಿಕ್ ಸಮಸ್ಯೆಗೆ, ಹಿರಿಯ ಅಧಿಕಾರಿಗಳ ಜೊತೆ ಪರಿಹಾರ ಕಾಣುವುದು ಬಿಟ್ಟು ಶಾಸಕರು ವಿದೇಶದಲ್ಲಿ ಕುಳಿತರೆ ಹೇಗೆ? ಮಂಜೇಶ್ವರ ಶಾಸಕರು ಇನ್ನು ಹನಿಮೂನ್ ಮೂಡ್ ನಿಂದ ಹೊರ ಬಂದಿಲ್ಲ. ಮಂಜೇಶ್ವರದ ಸಮಗ್ರ ಅಭಿವೃದ್ಧಿಗೆ ಸ್ಪಷ್ಟ ರೂಪುರೇμÉಗಳಿಲ್ಲ. ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಶಾಸಕರು ಬೊಟ್ಟು ಮಾಡುತ್ತಿಲ್ಲ ಎಂದಿರುವ ಬಿಜೆಪಿ ಶಾಸಕರ ಬೇಜವಾಬ್ದಾರಿತನ ಪ್ರಬುದ್ಧ ಜನತೆ ತಿಳಿಯಬೇಕು ಎಂದು ಆಗ್ರಹಿಸಿದೆ.         

              ಬಿಜೆಪಿ ಪ್ರಮುಖರ ಸಭೆಯಲ್ಲಿ ಮಂಡಲಾಧ್ಯಕ್ಷ ಆದರ್ಶ್ ಬಿಎಂ, ಸುಧಾಮ ಗೋಸಾಡ, ಮಣಿಕಂಠ ರೈ, ಅಶ್ವಿನಿ ಪಜ್ವ,  ಎ ಕೆ ಕಯ್ಯಾರ್, ದೂಮಪ್ಪ ಶೆಟ್ಟಿ, ಲೋಕೇಶ್ ನೋಂಡ, ಸದಾಶಿವ ಚೇರಲ್, ಶಂಕರ ನಾರಾಯಣ ಭಟ್ ಮುಂದಿಲ, ರಕ್ಷನ್ ಅಡಕಳ, ವಿಘ್ನೇಶ್ವರ ಮಾಸ್ತರ್, ರವಿರಾಜ್ ವರ್ಕಾಡಿ, ತುಳಸಿ ಕುಮಾರಿ,ಕೃಷ್ಣಪ್ಪ ಟಿ. ಉಪಸ್ಥಿತರಿದ್ದರು.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ವಂದಿಸಿದರು.

          ಅಭಿಮತ: ಮಂಜೇಶ್ವರ ಶಾಸಕರು ಮಂಜೇಶ್ವರದ ಗಡಿ ನಾಡಿನ ಸಮಸ್ಯೆಗಳಿಗೆ ಪರಿಹಾರ ಕಾಣುತ್ತಿಲ್ಲ, ನೂತನ ಒಂದು ಅಭಿವೃದ್ಧಿ ಯೋಜನೆಯನ್ನು ಮಂಡಲಕ್ಕೆ ತಂದಿಲ್ಲ, ರಾಜ್ಯ ಸರ್ಕಾರ ಮಂಜೇಶ್ವರಕ್ಕೆ ಮಾಡುವ ಅವಗಣನೆ ಶಾಸಕರು ಪ್ರಶ್ನಿಸುತ್ತಿಲ್ಲ, ಮಂಡಲದ ಅನೇಕ ಪಂಚಾಯತ್ ಗಳಲ್ಲಿ ಪ್ರಮುಖ ಕಾರ್ಯದರ್ಶಿ ಹುದ್ದೆಗಳೇ 3 ತಿಂಗಳಿಂದ ಖಾಲಿ ಇದೆ. ಪರಿಹಾರವಿಲ್ಲ ಪೈವಳಿಕೆ ಎಡರಂಗ -ಐಕ್ಯರಂಗ ಜಂಟಿ ಆಡಳಿತ ಮಾಡುತ್ತಿದ್ದರು ಜನತೆಯ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. .

                        -ಆದರ್ಶ್ ಬಿಎಂ

                   ಅಧ್ಯಕ್ಷರು ಬಿಜೆಪಿ ಮಂಜೇಶ್ವರ ಮಂಡಲ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries