ತಿರುವನಂತಪುರಂ: ಮುಖ್ಯಮಂತ್ರಿಗಳ ವಾಹನಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವಿಶೇಷ ಚೇತನರಾದ ನಾಲ್ವರು ವಿದ್ಯಾರ್ಥಿಗಳನ್ನು ಪೋಲೀಸರು ಬಂಧಿಸಿದ್ದಾರೆ.
ಕೊಲ್ಲಂನ ಚಡಯಮಂಗಲಂ ಬಳಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರು ಶ್ರವಣ ಸಾಮಥ್ರ್ಯ ಇಲ್ಲದವರು ಮತ್ತು ಮಾತನಾಡಲು ಸಾಧ್ಯವಿಲ್ಲದವರು. ನಾಲ್ವರೂ ವಿಶೇಷ ಚೇತನರಿಗಿರುವ ನಿಶ್ ಸಂಸ್ಥೆಯ ವಿದ್ಯಾರ್ಥಿಗಳು.
ನಿನ್ನೆ ರಾತ್ರಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಹಲವು ಬಾರಿ ಹಾರ್ನ್ ಮಾಡಿದರೂ ದಾರಿ ಬಿಡದ ಹಿನ್ನೆಲೆಯಲ್ಲಿ ಚಟಯಮಂಗಲಂ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಹಲವು ಬಾರಿ ಹಾರ್ನ್ ಮಾಡಿದರೂ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಹಿಂದೆಗೆದುಕೊಳ್ಳದಿದ್ದರಿಂದ ಅನುಮಾನಗೊಂಡ ವಿದ್ಯಾರ್ಥಿಗಳನ್ನು ಠಾಣೆಗೆ ಕರೆತರಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಅವರನ್ನು ನಿಶ್ ಅಧಿಕಾರಿಗಳನ್ನು ಕರೆಸಿ ಬಿಡುಗಡೆ ಮಾಡಲಾಯಿತು.





