ತ್ರಿಶೂರ್: ಮಲಯಾಳವನ್ನು ಜ್ಞಾನದ ಭಾಷೆಯಾಗಿ ಅಭಿವೃದ್ಧಿಪಡಿಸಲು ಮತ್ತು ಶೈಕ್ಷಣಿಕ ಸೇವೆಗಳ ಗುಣಮಟ್ಟವನ್ನು ಸುಧಾರಿಸಲು, ತುಂಜತ್ ಎಳುತ್ತಚ್ಚನ್ ಮಲಯಾಳಂ ವಿಶ್ವವಿದ್ಯಾಲಯ ಮತ್ತು ಸರ್ವವಿಜ್ಞಾನ ಕೋಶಮ್ ಸಂಸ್ಥೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿವೆ.
ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿದರು. ಇದು ಸರ್ವವಿಜ್ಞಾನ ಕೋಶಮ್ ಸಂಸ್ಥೆ ಮತ್ತು ಮಲಯಾಳಂ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳ ಆರಂಭವನ್ನು ಸೂಚಿಸುತ್ತದೆ ಎಂದಿರುವರು.
ಜ್ಞಾನ ಮತ್ತು ಮಾನವ ಸಂಪನ್ಮೂಲಗಳ ವರ್ಗಾವಣೆ, ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿಗಳ ಪ್ರಕಟಣೆ, ಶೈಕ್ಷಣಿಕ ಪ್ರಕಟಣೆಗಳ ಪ್ರಕಟಣೆ ಮತ್ತು ವಿದ್ವತ್ಪೂರ್ಣ ಪುಸ್ತಕಗಳ ರಚನೆÉಯಂತಹ ಕ್ಷೇತ್ರಗಳಲ್ಲಿ ಎರಡೂ ಸಂಸ್ಥೆಗಳು ಸಹಕರಿಸಲಿವೆ.
ಜ್ಞಾನ ಕ್ಷೇತ್ರದಲ್ಲಿ ಹೊಸ ಅರಿವನ್ನು ವಿನಿಮಯ ಮಾಡಿಕೊಳ್ಳಲು, ಶೈಕ್ಷಣಿಕ ಬರವಣಿಗೆಯ ನವೀನ ಮಾದರಿಗಳನ್ನು ಅಭಿವೃದ್ಧಿಪಡಿಸಲು, ಜ್ಞಾನದ ಕ್ಷೇತ್ರದಲ್ಲಿ ನವೀಕೃತ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲು, ಅಲ್ಪಾವಧಿಯ ಕೋರ್ಸ್‍ಗಳನ್ನು ನಡೆಸಲು, ವಿದ್ವತ್ಪೂರ್ಣ ಸೆಮಿನಾರ್‍ಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲು ಮತ್ತು ಮೂಲಸೌಕರ್ಯಗಳನ್ನು ಹಂಚಿಕೊಳ್ಳಲು ಅದೇ ರೀತಿ, ಸಂಸ್ಥೆಯ ಗ್ರಂಥಾಲಯವನ್ನು ವಿಶ್ವವಿದ್ಯಾನಿಲಯದ ಉಲ್ಲೇಖ ಗ್ರಂಥಾಲಯವಾಗಿ ಪರಿಗಣಿಸಲು, ಎರಡೂ ಸಂಸ್ಥೆಗಳ ಮಾನವ ಸಂಪನ್ಮೂಲಗಳನ್ನು ವಿನಿಮಯ ಮಾಡಿಕೊಳ್ಳಲು, ಜಂಟಿಯಾಗಿ ಪ್ರಕಟಣೆಗಳನ್ನು ಕೈಗೊಳ್ಳಲು ಮತ್ತು ಕಾರ್ಯಗತಗೊಳಿಸಲು, ಅಗತ್ಯವಿರುವಂತೆ ಹೊಸ ಯೋಜನೆಗಳನ್ನು ಕೈಗೊಳ್ಳಲು ಸಹಕರಿಸಲು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು.
ಪ್ರಸ್ತುತ ಮಲಯಾಳಂ ವಿಶ್ವವಿದ್ಯಾಲಯದಲ್ಲಿ 11 ವಿಭಾಗಗಳಿವೆ. ಅಲ್ಲಿ ಬೋಧನೆ ಮತ್ತು ಪರೀಕ್ಷೆಗಳೆಲ್ಲವೂ ಮಲಯಾಳಂನಲ್ಲಿದೆ. ಸಂಶೋಧನಾ ಪ್ರಬಂಧಗಳ ತಯಾರಿಯೂ ಮಲಯಾಳಂ ಭಾಷೆಯಲ್ಲಿದೆ. ಆದಾಗ್ಯೂ, ಮಲಯಾಳಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಎದುರಿಸುತ್ತಿರುವ ದೊಡ್ಡ ಮಿತಿಯೆಂದರೆ ಮಲಯಾಳಂ ಭಾಷೆಯಲ್ಲಿ ಅಗತ್ಯವಾದ ಪಾಂಡಿತ್ಯಪೂರ್ಣ ಕೃತಿಗಳ ಲಭ್ಯತೆಯಿಲ್ಲದಿರುವುದು. ಎಂಒಯು ಮುಖ್ಯವಾಗಿ ಅದನ್ನು ನಿವಾರಿಸುವ ಗುರಿಯನ್ನು ಹೊಂದಿದೆ.
ಪ್ರಾರಂಭದ ಹಂತವಾಗಿ, ರಾಜ್ಯ ವಿಶ್ವಕೋಶ ಸಂಸ್ಥೆಯು ಮಲಯಾಳಂ ವಿಶ್ವವಿದ್ಯಾಲಯದ ಐದು ವಿಭಾಗಗಳಿಗೆ ಕಿರು ವಿಶ್ವಕೋಶವನ್ನು ಪ್ರಕಟಿಸುತ್ತದೆ. ವಿಶ್ವವಿದ್ಯಾನಿಲಯವು ಇದಕ್ಕೆ ಶೈಕ್ಷಣಿಕ ಬೆಂಬಲವನ್ನು ನೀಡುತ್ತದೆ. ಮೊದಲನೆಯದಾಗಿ ಚಲನಚಿತ್ರ ಅಧ್ಯಯನ, ಮಾಧ್ಯಮ ಅಧ್ಯಯನ, ಪರಂಪರೆ ಅಧ್ಯಯನ, ಭಾಷಾಂತರ ಅಧ್ಯಯನ ಮತ್ತು ಪರಿಸರ ಅಧ್ಯಯನ ವಿಭಾಗಗಳಿಗೆ ಅಗತ್ಯವಿರುವ ಕಿರು ವಿಶ್ವಕೋಶಗಳನ್ನು ಸಿದ್ಧಪಡಿಸಲಾಗುವುದು. ಮುಂದಿನ ಹಂತದಲ್ಲಿ ಇತರ ಇಲಾಖೆಗಳೂ ಕಿರು ವಿಶ್ವಕೋಶಗಳನ್ನು ಸಿದ್ಧಪಡಿಸಲಿವೆ.
ಮಲಯಾಳಂ ವಿಶ್ವವಿದ್ಯಾನಿಲಯದ ಶಿಕ್ಷಕರು ಮತ್ತು ಸಂಶೋಧಕರು ಈ ಚಟುವಟಿಕೆಗಳನ್ನು ಮುನ್ನಡೆಸಲಿದ್ದಾರೆ ಎಂದು ಸಚಿವೆ ಬಿಂದು ಮಾಹಿತಿ ನೀಡಿದರು. ಮಲಯಾಳಂ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಲ್. ಸುಷ್ಮಾ, ಸರ್ವವಿಜ್ಞಾನಕೋಶಂ ಸಂಸ್ಥೆಯ ನಿರ್ದೇಶಕಿ ಡಾ. ಮ್ಯೂಸ್ ಮೇರಿ ಜಾರ್ಜ್, ಮಲಯಾಳಂ ವಿಶ್ವವಿದ್ಯಾಲಯದ ಸಾಂಸ್ಕøತಿಕ ಪರಂಪರೆ ಅಧ್ಯಯನ ನಿರ್ದೇಶಕ ಕೆ. ಎಂ. ಭರತನ್ ಭಾಗವಹಿಸಿದ್ದರು.





