ಕುಂಬಳೆ: ಗ್ರಾಮಬಂಡಿ ಯೋಜನೆಯ ಮೂಲಕ ಎಲ್ಲರಿಗೂ ಕೆ.ಎಸ್.ಆರ್.ಟಿ.ಸಿ. ಸೇವೆ ದೊರೆಯುವಂತೆ ಮಾಡುವ ಗುರಿ ಸರ್ಕಾರದ್ದಾಗಿದೆ ಎಂದು ರಾಜ್ಯ ಸಾರಿಗೆ ಸಚಿವ ಆಂಟನಿ ರಾಜು ಹೇಳಿದರು.
ಕುಂಬಳೆ ಗ್ರಾಮ ಪಂಚಾಯಿತಿ ಹಾಗೂ ಕೆಎಸ್‍ಆರ್‍ಟಿಸಿ ಜಂಟಿಯಾಗಿ ಹಮ್ಮಿಕೊಂಡಿರುವ ‘ಗ್ರಾಮ ಬಂಡಿ’ ಯೋಜನೆಯನ್ನು ಶುಕ್ರವಾರ ಕುಂಬಳೆ ಬಂಬ್ರಾಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಒಳನಾಡಿನ ಪ್ರಯಾಣ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಸ್ಥಳೀಯಾಡಳಿತ ಸರ್ಕಾರ ಮತ್ತು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜಂಟಿಯಾಗಿ ತಂದಿರುವ ಯೋಜನೆ ಗ್ರಾಮಬಂಡಿಯಾಗಿದೆ.
ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಓದುತ್ತಿರುವ ಮಂಜೇಶ್ವರ ವ್ಯಾಪ್ತಿಯ ವಿದ್ಯಾರ್ಥಿಗಳ ಬಹುಕಾಲದ ಬಸ್ ರಿಯಾಯಿತಿಯ ಕನಸನ್ನು ರಾಜ್ಯ ಸರ್ಕಾರ ನನಸು ಮಾಡಿದೆ. ಎ.ಐ. ಕ್ಯಾಮೆರಾ ಜಾರಿಗೆತಂದಾಗ ವಿವಿಧ ಮೂಲೆಗಳಿಂದ ಅನೇಕ ರೀತಿಯ ಆಕ್ಷೇಪಣೆಗಳು ಬಂದವು. ಎ.ಐ. ಕ್ಯಾಮೆರಾ ಬಂದ ಬಳಿಕ, ವಾಹನ ಅಪಘಾತಗಳು ಮತ್ತು ಸಂಚಾರ ಉಲ್ಲಂಘನೆಗಳ ಸಂಖ್ಯೆ ಕಡಿಮೆಯಾಗಿದೆ. ರಾಜ್ಯ ಸರ್ಕಾರ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ದೇಶದಲ್ಲೇ ಮಾದರಿ ಎಐ ಕ್ಯಾಮೆರಾ ಕುರಿತು ತಿಳಿದುಕೊಳ್ಳಲು ಕರ್ನಾಟಕ, ಮಹಾರಾಷ್ಟ್ರದಂತಹ ರಾಜ್ಯಗಳಿಂದ ಅಧಿಕಾರಿಗಳು ಬರುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಉದ್ಘಾಟನೆ ಸಂದರ್ಭದಲ್ಲಿ ಗ್ರಾಮ ಬಂಡಿಯ ಮೊದಲ ದಿನದ ಸೇವೆ ಉಚಿತವಾಗಿತ್ತು. ಧ್ವಜಾರೋಹಣದ ನಂತರ ನಡೆದ ಚೊಚ್ಚಲ ಮೆರವಣಿಗೆಯಲ್ಲಿ ಜನಪ್ರತಿನಿಧಿಗಳೊಂದಿಗೆ ಸಚಿವರು ಪಾಲ್ಗೊಂಡರು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಸಿ.ಎ. ಸೈಮಾ, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್ ಭಾಗವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಸಿರ್ ಮೊಗ್ರಾಲ್, ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಜಿಲ್ಲಾ ಪಂಚಾಯತಿ ಸದಸ್ಯೆ ಜಮೀಲಾ ಸಿದ್ದೀಕ್, ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯೆ ಪ್ರೇಮಾ ಶೆಟ್ಟಿ, ಸೀನತ್ ನಾಸೀರ್, ಕುಂಬಳೆ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಂ.ಸಬೂರ, ನಸೀಮಾ ಖಾಲಿದ್, ಬಿ.ಎ.ರಹಮಾನ್, ಕುಂಬಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಅನ್ವರ್ ಹುಸೇನ್, ಕೆ.ಮೋಹನನ್, ಯೂಸುಫ್ ಉಳುವಾರ್, ಪುಷ್ಪಲತಾ ಪಿ.ಶೆಟ್ಟಿ, ರವಿರಾಜ್, ಪಿ.ಕೆ.ಐಶಾತ್ ರಜಿಯಾ, ಎಸ್.ಪ್ರೇಮಲತಾ, ಪಿ.ಸುಲೋಚನಾ, ಎಸ್.ಶೋಭಾ, ಎಂ.ಅಜಯ್, ಅನಿಲ್. ಕುಮಾರ್, ಸಿ.ಎಂ.ಮುಹಮ್ಮದ್, ತಾಹಿರಾ ಜಿ. ಶಂಸೀರ್, ಕೆ.ಅಬ್ದುಲ್ ರಿಯಾಝ್, ಎಂ.ಕೌಲತ್ ಬೀವಿ, ವಿವೇಕಾನಂದ ಶೆಟ್ಟಿ, ವಿದ್ಯಾ ಎನ್ ಪೈ, ಪ್ರೇಮಾವತಿ, ಎಂ.ಅಬ್ಬಾಸ್, ಮಂಜುನಾಥ ಆಳ್ವ, ಎ.ಕೆ.ಆರಿಫ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಬಿ.ಎನ್.ಮುಹಮ್ಮದ್ ಅಲಿ, ಲೋಕನಾಥ ಶೆಟ್ಟಿ, ಸಿ.ಎ.ಜುಬೇರ್, ಜಯರಾಂ. ಬಳ್ಳಂಗುಡೇಲ್, ಸನ್ನಿ ಅರಮನೆ, ಪ್ರದೀಪ್, ತಾಜುದ್ದೀನ್ ಮೊಗ್ರಾಲ್, ಅಹ್ಮದ್ ಅಲಿ ಕುಂಬಳೆ, ರಾಘವ ಚೇರಾಲ್, ಪ್ರಜು ಕೆ. ಬಳ್ಳೂರು, ಮಹ್ಮದ್ ಕೈಕಂಬ, ಸಿದ್ದಿಕ್ ಕೊಡ್ಯಮೆ, ಹಸೈನಾರ್ ನುಳ್ಳಿಪ್ಪಾಡಿ, ಕೆಎಸ್‍ಆರ್‍ಟಿಸಿ ಆಡಳಿತ ಮತ್ತು ಕಾರ್ಯಾಚರಣೆ ವಿಭಾಗದ ಅಧಿಕಾರಿ ಜಿ.ಪಿ. ಪ್ರದೀಪ್ ಕುಮಾರ್, ಕೆಎಸ್‍ಆರ್‍ಟಿಸಿ ಉತ್ತರ ಕಾರ್ಯನಿರ್ವಾಹಕ ನಿರ್ದೇಶಕ ವಿ.ಮನೋಜ್ ಕುಮಾರ್, ಕೆಎಸ್‍ಆರ್‍ಟಿಸಿ ಕ್ಲಸ್ಟರ್ ಅಧಿಕಾರಿ ಕೆ.ಪ್ರಿಯೇಶ್ ಕುಮಾರ್, ಮೋಹನ್ ಕುಮಾರ್ ಪತಿ, ಬಿಜು ಜಾನ್, ಸಿಎಚ್ ಹರೀಶ್ ಕುಮಾರ್, ಕುಂಬಳೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ವಿರಾಜ್ ತಂಬುರಾನ್, ಅಶ್ರಫ್ ಕೊಡ್ಯಮೆ ಮಾತನಾಡಿದರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಸ್ವಾಗತಿಸಿ, ಕೆ.ಎಸ್.ಆರ್.ಟಿ.ಸಿ ವಿಜಿಲೆನ್ಸ್ ಅಧಿಕಾರಿ ಹಾಗೂ ಗ್ರಾಮ ಬಂಡಿ ವಿಶೇಷಾಧಿಕಾರಿ ವಿ.ಎಂ.ತಾಜುದ್ದೀನ್ ಸಾಹಿಬ್ ವಂದಿಸಿದರು.




.jpeg)
.jpeg)
.jpeg)
.jpg)
