ಉಪ್ಪಳ: ಉಪ್ಪಳ ಅಗ್ನಿಶಾಮಕ ಠಾಣೆ ವ್ಯಾಪ್ತಿಯಲ್ಲಿ ತರಬೇತಿ ಪೂರ್ಣಗೊಳಿಸಿದ ಆಪ್ತ ಮಿತ್ರ ಸ್ವಯಂಸೇವಕರಿಗೆ ತುರ್ತು ಸ್ಪಂದನೆ ಕಿಟ್‍ಗಳನ್ನು ಠಾಣಾಧಿಕಾರಿ ಸಿ. ಪಿ.ರಾಜೇಶ್ ವಿತರಿಸಿದರು.
ಲೈಫ್ ಜಾಕೆಟ್, ಹೆಲ್ಮೆಟ್, ಗಮ್ ಬೂಟ್, ಪ್ರಥಮ ಚಿಕಿತ್ಸಾ ಕಿಟ್, ಎಮರ್ಜೆನ್ಸಿ ಲ್ಯಾಂಪ್ ಹೀಗೆ ವಿಪತ್ತು ಸಂದರ್ಭಗಳಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯಕವಾಗುವ 14 ಬಗೆಯ ಉಪಕರಣಗಳನ್ನು ಕಿಟ್ ಹೊಂದಿದೆ.
ಸಹಾಯಕ ಠಾಣಾಧಿಕಾರಿ ಶೈಜು. ಸಿ, ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ಗೋಪಾಲಕೃಷ್ಣನ್. ವಿ.ವಿ, ಸಿವಿಲ್ ಡಿಫೆನ್ಸ್ ಪೋಸ್ಟ್ ವಾರ್ಡನ್ ಬಿನೀಶ್ ಮತ್ತು ಉಪ ಪೋಸ್ಟ್ ವಾರ್ಡನ್ ಲತೀಫ್ ಕೊಡ್ಯಮೆ ಮಾತನಾಡಿದರು.




.jpg)
