ಕುಂಬಳೆ : ಸರೋವರ ಕ್ಷೇತ್ರ ಅನಂತಪುರ ಶ್ರೀಅನಂತಪದ್ಮನಾಭ ಸನ್ನಿಧಿಯಲ್ಲಿ ಇಂದು(ಅ.18) ನವಾನ್ನ ಸಮರ್ಪಣೆ ಹಾಗೂ ಬಲಿವಾಡು ಕೂಟ ದೇಲಂಪಾಡಿ ಬ್ರಹ್ಮಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಬೆಳಿಗ್ಗೆ ತುಲಾ ತೆನೆ ಸಮರ್ಪಣೆ, ಗಣಪತಿ ಹೋಮ, ಶುದ್ದಿಕಲಶ ನಡೆಯಲಿದೆ. 9ಕ್ಕೆ ವೇದಪಾರಾಯಣ, 10 ರಿಂದ ವಿಜಯಲಕ್ಷ್ಮೀ ಶಂ.ನಾ.ಅಡಿಗ ಅವರಿಂದ ಹತಿಕಥಾ ಸತ್ಸಂಗ, 12.30ಕ್ಕೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2.30 ರಿಂದ ನಾರಾಯಣಮಂಗಲ ವಿಘ್ನೇಶ್ವರ ಯಕ್ಷಗಾನ ಕಲಾಸಂಘದವರಿಂದ ಗಜೇಂದ್ರ ಮೋಕ್ಷ ಯಕ್ಷಗಾನ ತಾಳಮದ್ದಳೆ, ಸಂಜೆ 6.15ಕ್ಕೆ ದೀಪಾರಾಧನೆ, 7.30ಕ್ಕೆ ವಿಶೇಷ ಕಾರ್ತಿಕಪೂಜೆ ನಡೆಯಲಿದೆ.




