HEALTH TIPS

ಎಸ್‍ಪಿಸಿ ಜಿಲ್ಲಾ ಕಛೇರಿ ವತಿಯಿಂದ ವಿದ್ಯಾರ್ಥಿಗಳಿಗೆ ಎಕ್ಸಲೆನ್ಸ್-2023 ಅಭಿನಂದನಾ ಸಮಾರಂಭ

                   ಕಾಸರಗೋಡು: 2022-23 ರ ಎಸ್‍ಎಸ್‍ಎಲ್‍ಸಿ ಮತ್ತು ಪ್ಲಸ್ ಟು ಪರೀಕ್ಷೆಗಳಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ಕಾಸರಗೋಡು ಶಿಕ್ಷಣ ಜಿಲ್ಲೆಯ ಸ್ಟೂಡೆಂಟ್ ಪೊಲೀಸ್ ಕ್ಯಾಡೆಟ್(ಎಸ್‍ಪಿಸಿ)ಗಳ ಎಕ್ಸಲೆನ್ಸ್ 2023 ಎಂಬ ಅಭಿನಂದನಾ ಕಾರ್ಯಕ್ರಮ ಜಿಎಚ್‍ಎಸ್‍ಎಸ್ ಕುಂಡಂಕುಳಿಯಲ್ಲಿ ನಡೆಸಲಾಯಿತು.

             ಶಾಸಕ ಸಿ.ಎಚ್.ಕುಞಂಬು ಉದ್ಘಾಟಿಸಿದರು. ಜಿಲ್ಲಾ ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಹಾಗೂ ಎಸ್‍ಪಿಸಿ ಜಿಲ್ಲಾ ನೋಡಲ್ ಅಧಿಕಾರಿ ಎಂ.ಎ.ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ನಂದಿಕೇಶನ್, ಬೇಕಲ ಡಿವೈಎಸ್ಪಿ ಸಿ.ಕೆ.ಸುನೀಲಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬೇಡಡ್ಕ ಗ್ರಾಮ ಪಂಚಾಯಿತಿ ಹಿತರಕ್ಷಣಾ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವರದರಾಜ್, ಬೇಡಡ್ಕ ಪೆÇಲೀಸ್ ಠಾಣೆ ಇನ್ಸ್ ಪೆಕ್ಟರ್ ಟಿ.ದಾಮೋದರನ್, ಶಾಲಾ ಸಂಚಾಲಕ ಕೆ.ರತ್ನಾಕರನ್, ಮುಖ್ಯಶಿಕ್ಷಕ ಎಂ.ಅಶೋಕ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಮಾಧವನ್, ಎಸ್‍ಎಂಸಿ ಅಧ್ಯಕ್ಷ ಪಿ.ಕೆ.ಗೋಪಾಲನ್, ಮದರ್ ಪಿಟಿಎ ಅಧ್ಯಕ್ಷೆ ಬಿ.ಪಿ.ವೀಣಾಕುಮಾರಿ, ಶಾಲಾ ಹಿರಿಯ ಸಹಾಯಕ ಪಿ.ಹಾಶಿಮ್, ಸಿಬ್ಬಂದಿ ಕಾರ್ಯದರ್ಶಿ ಸಿ.ಪ್ರಶಾಂತ್ ಮಾತನಾಡಿದರು. ಎಸ್‍ಪಿಸಿ ಜಿಲ್ಲಾ ಸಹಾಯಕ ನೋಡಲ್ ಅಧಿಕಾರಿ ಟಿ. ತಂಬಾನ್ ಸ್ವಾಗತಿಸಿದರು.  ಎಸ್‍ಪಿಸಿ ಜಿಲ್ಲಾ ಸಂಯೋಜಕ ಕೆ.ಅಶೋಕನ್ ವಂದಿಸಿದರು. 15 ಶಾಲೆಗಳ 260 ಕೆಡೆಟ್‍ಗಳು ಪ್ರಮಾಣಪತ್ರ ಮತ್ತು ಪದಕಗಳನ್ನು ಪಡೆದರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries