ಕಾಸರಗೋಡು: ಜಿಲ್ಲೆಯಲ್ಲಿ 2024 ಜ. 28ರಿಂದ 30ರ ವರೆಗೆ ನಡೆಯಲಿರುವ ಭಾರತೀಯ ರಾಜ್ಯ ಪೆನ್ಶನರ್ಸ ಮಹಾಸಂಘದ ಅಖಿಲಭಾರತ ವಾರ್ಷಿಕ ಸಮ್ಮೇಳನಕ್ಕೆ ಸಂಬಂಧಿಸಿ ಸ್ವಾಗತ ಸಮಿತಿ ರಚನಾ ಸಭೆ ಕಲ್ನಾಡ್ ರೆಸಿಡೆನ್ಸಿಯ ಕೆ.ಎಚ್ ಆಡಿಟೋರಿಯಂನಲ್ಲಿ ಜರುಗಿತು.
ಆರೆಸ್ಸೆಸ್ ಮಾಜಿ ವಿಭಾಗ ಕಾರ್ಯವಾಹ್ ಎ ಪಿ ವಿಷ್ಣು ಸಮಾರಂಭ ಉದ್ಘಾಟಿಸಿದರು.ಜಿಲ್ಲಾಧ್ಯಕ್ಷ ಎಂ.ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಸಂಘದ ದೇಶೀಯ ಅಧ್ಯಕ್ಷ ಸಿ ಎಚ್ ಸುರೇಶ್ ಸಮ್ಮೇಳನದ ಕಾರ್ಯಕ್ರಮಗಳನ್ನು ವಿವರಿಸಿದರು. ಸಂಘದ ಕೇರಳ ರಾಜ್ಯದ ಕಾರ್ಯಧ್ಯಕ್ಷ ಡಾ.ಕರುಣನ್ ಕಣ್ಣನ್ಪೊಯಿಲಿಲ್, ಬಿಜೆಪಿ ಮಾಜಿ ವಲಯಾಧ್ಯಕ್ಷ ವಿ. ರವೀಂದ್ರನ್, ವಕೀಲ ಕರಿಂದಳಂ ರಾಜಗೋಪಾಲನ್, ಕೊಟ್ಟೋಡಿ ಗೋವಿಂದನ್ ಮಾಸ್ಟರ್, ಮುರಳೀಧರಯಾದವ್, ಉಮಾದೇವಿ ಟೀಚರ್, ಬೇಬಿ ಕೂಡ್ಲು, ಕಾಸರಗೋಡು ಬಾಲಕೃಷ್ಣನ್, ಜಿ.ದಿವಾಕರನ್, ಕೈಲಾಸನ್, ಬಾಲಚಂದ್ರನ್, ಸದಾನಂದ ಮಾಸ್ಟರ್, ಎ.ಮುಳೀಧರನ್, ರಾಮಚಂದ್ರ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಸೆಕ್ರೆಟರಿ ಸಿ ಎಚ್ ಜಯೇಂದ್ರ ಸ್ವಾಗತಿಸಿ ಅಖಿಲಭಾರತ ಕೋಶಾಧಿಕಾರಿ ಕೆ ದಯಾನಂದ ವಂದಿಸಿದರು.
ಈ ಸಂದರ್ಭ ಸ್ವಾಗತ ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಎ.ಪಿ ವಿಷ್ಣು, ಮತ್ತು ವಿ.ರವೀಂದ್ರನ್(ರಕ್ಷಾಧಿಕಾರಿಗಳು)ವಕೀಲ ಕರಿಂದಳಂ ರಾಜಗೋಪಾಲನ್ ಅಧ್ಯಕ್ಷ, ಮುರಳೀಧರ ಯಾದವ್ ಮತ್ತು ವಕೀಲ ಎ.ಎನ್ ಅಶೋಕ್ ಕುಮಾರ್ ಉಪಾಧ್ಯಕ್ಷರು, ಎಂ ಬಾಲಕೃಷ್ಣ ಮಲ್ಲಿಗೆಮಾಡು ಪ್ರಧಾನ ಕಾರ್ಯದರ್ಶಿ, ಸಿ ಎಚ್ ಜಯೇಂದ್ರ ಮತ್ತು ಬಾಲಚಂದ್ರನ್ ಜತೆ ಕಾರ್ಐದರ್ಶಿ, ಮಾಧವನ್ ನಾಯರ್ ಕೋಶಾಧಿಕಾರಿ, ಕೊಟ್ಟೋಡಿ ಗೋವಿಂದನ್ ಮಾಸ್ಟರ್ ಪ್ರಚಾರ ಸಮಿತಿ ಅಧ್ಯಕ್ಷ, ಎ. ಮುರಳೀಧರನ್ ಪ್ರಚಾರ ಸಮಿತಿ ಕನ್ವೀನರ್ ಹಾಗೂ 51 ಮಂದಿ ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

