ಮಂಜೇಶ್ವರ: ದಾನಿಗಳ ನೆರವಿನ ಜತೆಗೆ ಭಕ್ತಾದಿಗಳ ಸಹೃದಯದಿಂದ ಕೂಡಿದ ಸಹಕಾರವಿದ್ದಲ್ಲಿ ಕ್ಷೇತ್ರಗಳ ಜೀರ್ಣೋದ್ಧಾರ ಕಾರ್ಯಗಳು ಶೀಘ್ರ ನೆರವೇರಲು ಸಾಧ್ಯ ಎಂಬುದಾಗಿ ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಮಂಜೇಶ್ವರ ಸನಿಹದ ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ಶ್ರೀ ಪಾಡಾಂಗರೆ ಭಗವತೀ ಮಾತೆಯ ಹಾಗೂ ವೀರಪುತ್ರ ದೈವದ ಗರ್ಭಗುಡಿಗೆ ನಡೆದ ಶಿಲಾನ್ಯಾಸ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲ ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ತಂತ್ರಿವರ್ಯರಾದ ಮೂಡುಮನೆ ಅಶೋಕ ರಾಮಚಂದ್ರ ಪದಕಣ್ಣಾಯ, ಕೇಶವ ಕಾರ್ನವರು, ನಾರಾಯಣ ಭಗವತೀ ಪೂಜಾರಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ಖ್ಯಾತ ಉದ್ಯಮಿ, ಕೊಡುಗೈ ದಾನಿ, ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಉದ್ಯಮಿಗಳಾದ ಕುಸುಮೋಧರ ಶೆಟ್ಟಿ ದಡ್ಡಂಗಡಿ, ಮಹಾಬಲೇಶ್ವರ ಭಟ್ ಎಡಕ್ಕಾನ, ವಿವಿಧ ಕ್ಷೇತ್ರಗಳ ಧಾರ್ಮಿಕ ಮುಂದಾಳುಗಳಾದ ದೇವಿ ಚರಣ್ ಶೆಟ್ಟಿ, ನಾರಾಯಣ ಹೆಗ್ಡೆ ಕೋಡಿಬೈಲು, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರವೀಣ, ಡಾ. ಶ್ರೀಧರ್ ಭಟ್, ಹರಿನಾಥ ಭಂಡಾರಿ ಮುಳಿಂಜ, ಶ್ರೀಧರ ಶೆಟ್ಟಿ ಗುಬ್ಯ ಕನ್ಯಾನ, ರಾಮ ಪ್ರಕಾಶ್ ಆಳ್ವ ಪಟ್ಟತ್ತೂರು, ಜಯರಾಮ ಬಲ್ಲಂಗುಡೇಲು, ರವೀಂದ್ರ ಶೆಟ್ಟಿ ಕರಿಬೈಲು, ಸುಕುಮಾರ ಉಪ್ಪಳ, ಕರುಣಾಕರ ಕುಂಬಳೆ, ಸತೀಶ್ ವೈದ್ಯರು, ಶ್ರೀಮತಿ ಇಂದಿರಾ ಕೋರಿಕ್ಕಾರ್, ಮಾರಪ್ಪ ಶೆಟ್ಟಿ ಕೌಡೂರು ಬೀಡು, ರತನ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ದಡ್ಡoಗಡಿ, ಮೊದಲಾದವರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಮೂಡಂಬೈಲು ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು.


