HEALTH TIPS

BIG BREAKING: ಮತ್ತೆ ಪವಾಡ: ಅನಂತಪುರದಲ್ಲಿ ಮರಿ ಬಬಿಯಾ ಪ್ರತ್ಯಕ್ಷ: ಪುಳಕಿತರಾದ ತುಳುನಾಡು

               ಕುಂಬಳೆ: ಇತಿಹಾಸ ಪ್ರಸಿದ್ದ ಸರೋವರ ಕ್ಷೇತ್ರ ಕುಂಬಳೆ ನಾಯ್ಕಾಪು ಸಮೀಪದ ಅನಂತಪುರ ಅನಂತಪದ್ಮನಾಭ ಕ್ಷೇತ್ರದ ಜನಾಕರ್ಷಣೆಯ ಕೇಂದ್ರವಾಗಿದ್ದ ಬಬಿಯಾ ಮೊಸಳೆಯ ನಿಧನದ ಬಳಿಕ ಕುತೂಹಲ ಮೂಡಿಸುವಂತೆ ಮತ್ತೊಂದು ಮೊಸಳೆ ಶನಿವಾರ ಮಧ್ಯಾಹ್ನ ಗೋಚರಿಸಿದ್ದು ಪುಳಕಮೂಡಿಸಿದೆ.

            ಶತಮಾನಗಳ ಇತಿಹಾಸವಿರುವ ಇಲ್ಲಿಯ ಶ್ರೀಅನಂತಪದ್ಮನಾಭ ಕ್ಷೇತ್ರ ಅಲ್ಲಿಯ ಬಬಿಯಾ ಹೆಸರಿನ ಸಸ್ಯಾಹಾರಿ ಮೊಸಳೆಯಿಂದಲೂ ಪ್ರಸಿದ್ದ. ದೇವಾಲಯದ ಸುತ್ತ ಹರಡಿರುವ ಸರೋವರದಲ್ಲಿ ವಾಸಿಸುವ ಸಾಧು ಪ್ರಾಣಿಯಾಗಿದ್ದ ಮೊಸಳೆ ಪ್ರತಿನಿತ್ಯ ಮಧ್ಯಾಹ್ನ ಪೂಜೆಯ ಬಳಿಕ ಅರ್ಚಕರು ನೀಡುವ ನೈವೇದ್ಯ ಸ್ವೀಕರಿಸಲು ಅಲ್ಪಹೊತ್ತು ಕೆಲವೊಮ್ಮೆ ಕಾಣಿಸುವುದಿದೆ.


    ಇಲ್ಲಿಯ ಬಬಿಯಾ ಮೊಸಳೆ ಕಳೆದ ವರ್ಷ ಅಕ್ಟೋಬರ್ 10 ರಂದು ನಿಧನಹೊಂದಿತ್ತು. ಕ್ಷೇತ್ರದ ಇತಿಹಾಸದಂತೆ ಒಂದು ಮರೆಯಾದರೆ ಮತ್ತೊಂದು ತನ್ನಿಂದತಾನೆ ಆಗಮಿಸುವುದೆಂಬ ಪ್ರತೀತಿ. ಕಳೆದ ತಿಂಗಳು ಹಿಂದಿನ ಬಬಿಯಾ ಮೃತನಾಗಿ ವರ್ಷವೊಂದು ಕಳೆದಿದ್ದು, ಇದೀಗ ತಿಂಗಳೊಳಗೆ ಮತ್ತೊಂದು ಮೊಸಳೆ ಆಗಮಿಸಿರುವುದು ಆಸ್ತಕರ ಭಕ್ತಿ ಪರಾಕಾಷ್ಟೆಗೆ ಕಾರಣವಾಗಿದೆ.

     ಕಳೆದ ಬುಧವಾರದಿಂದ ಇಲ್ಲಿ ಮೊಸಳೆ ನೋಡಿರುವುದಾಗಿ ಕೆಲವು ಭಕ್ತರು ತಿಳಿಸಿದ್ದು, ಶನಿವಾರ ದೇವಾಲಯದ ಅರ್ಚಕರು, ಆಡಳಿತ ಮಂಡಳಿ ಸದಸ್ಯರು ಕಣ್ಣಾರೆ ಕಂಡು ದೃಢೀಕರಿಸಿದ್ದಾರೆ. ಈ ಮೂಲಕ ಭಕ್ತರ ಶ್ರದ್ದೆ, ನಂಬಿಕೆಗಳು ಈ ಕಾಲದಲ್ಲೂ ಪುಷ್ಠಿಗೊಳ್ಳಲು ದೈವಸಂಕಲ್ಪದಂತೆ ಸಾಕಾರಗೊಂಡಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries