ಕುಂಬಳೆ: ಪ್ರಾಣಿತ್ಯಾಜ್ಯದಿಂದ ತಯಾರಿಸುತ್ತಿರುವ ಜೈವಿಕ ಗೊಬ್ಬರ ಪ್ಲಾಂಟ್‍ನಿಂದ ಕಂಗೆಟ್ಟಿರುವ ಅನಂತಪುರ ಪ್ರದೇಶದ ಜನತೆಗೆ ಮಣ್ಣುಸಾಗಾಟದ ಸಂಕಷ್ಟ ಎದುರಾಗಿದೆ. ಭಾರಿ ಪ್ರಮಾಣದಲ್ಲಿ ಲ್ಯಾಟರೈಟ್ ಮಣ್ಣು ಸಾಗಾಟ ನಡೆಯುತ್ತಿರುವುದು ಪರಿಸರಕ್ಕೆ ಭಾರಿ ಹಾನಿಯುಂಟುಮಾಡುತ್ತಿರುವ ಬಗ್ಗೆ ಇಲ್ಲಿನ ಜನತೆ ದೂರು ಸಲ್ಲಿಸುತ್ತಾ ಬಂದಿದ್ದರೂ, ಈ ಬಗ್ಗೆ ಕಿವಿಗೊಡದಿರುವುದರಿಂದ ಗುರುವಾರ ಮಣ್ಣುಸಾಗಾದ ಲಾರಿಗಳಿಗೆ ನಾಗರಿಕರೇ ತಡೆಯೊಡ್ಡಿದ್ದಾರೆ. ನಿಗದಿತ ಅಳತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಸಾಗಿಸುತ್ತಿರುವ ಬಗ್ಗೆ ಮಾಹಿತಿಪಡೆದ ಸ್ಥಳೀಯರು ನಾಲ್ಕು ಟೋರಸ್ ಲಾರಿಗಳನ್ನು ತಡೆದು ಇದನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಲಾರಿಗಳನ್ನು ವಎಬ್ರಿಜ್ ಮೂಲಕ ತೂಕ ನಡೆಸಿದಾಗ ಪ್ರತಿಲಾರಿಯಲ್ಲಿ ನಿಗಿದಿಗಿಂತ ನಾಲ್ಕು ಟನ್‍ಗೂ ಹೆಚ್ಚು ಮಣ್ಣು ಪತ್ತೆಯಾಗಿತ್ತು. ಲಾರಿಗಳಿಮದ 70ಸಾವಿರ ರಊ. ದಂಡ ವಸೂಲಿಮಾಡಿ, ಹೆಚ್ಚಿನ ಪ್ರಮಾಣದ ಮಣ್ಣನ್ನು ಗುಡ್ಡದಲ್ಲಿ ವಪಾಸು ತಂದಿಳಿಸಲು ಆದೇಶಿಸಲಾಯಿತು.





