ಕುಂಬಳೆ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ಆಯೋಜಿಸಿದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಕಾಸರಗೋಡು ಜಿಲ್ಲೆಯ ಕುಂಬಳೆಯ ಸ್ನೇಹಲತಾ ದಿವಾಕರ್ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
ಸದಾಶಿವ ಸೊರಟೂರು (ಹೊನ್ನಾಳಿ) ದ್ವಿತೀಯ, ರಂಜಿತಾ ಪಿ. ಆರ್ (ಮೈಸೂರು) ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಶಿವಕುಮಾರ ಚೆನ್ನಪ್ಪನವರ (ರಾಣಿಬೆನ್ನೂರು), ಶ್ರೀ ಚೌಡಪ್ಪ (ಹಂಪಿ) ಇವರು ಮೆಚ್ಚುಗೆಯ ಬಹುಮಾನವನ್ನು ಗಳಿಸಿದ್ದಾರೆ. ಈ ಬಾರಿ ಒಟ್ಟು 127 ಕವನಗಳು ಸ್ಪರ್ಧೆಗೆ ಬಂದಿದ್ದು ಡಾ. ಸುಭಾಷ್ ಪಟ್ಟಾಜೆ ಮತ್ತು ಕುಮಾರಿ ಭವ್ಯ ಭಟ್ ಅವರು ತೀರ್ಪುಗಾರರಾಗಿ ಸಹಕರಿಸಿದ್ದಾರೆ.
ಜನ ಸಾಮಾನ್ಯರ ಬದುಕಿನ ನೋವು ನಲಿವುಗಳಿಗೆ ಸ್ಪಂದಿಸುವ, ಸಂಸ್ಕøತಿಯ ಸೂಕ್ಷ್ಮಗಳನ್ನು ಪ್ರತಿಪಾದಿಸಿದ ಕವಿತೆಗಳಿಗೆ ಆದ್ಯತೆಯನ್ನು ನೀಡಲಾಗಿದೆ. ಚಿಂತನೆಗೆ ಹಚ್ಚುವ, ವೈಚಾರಿಕ ನೆಲೆಗಟ್ಟಿನಲ್ಲಿ ಸಮಕಾಲೀನ ಸ್ಥಿತಿಗತಿಗಳಿಗೆ ಕನ್ನಡಿಯನ್ನು ಹಿಡಿಯುವ, ವಾಸ್ತವ ಸತ್ಯವನ್ನು ಒಳಗೊಂಡಿರುವ ಕವಿತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂಬುದಾಗಿ ತೀರ್ಪುಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





