ಬದಿಯಡ್ಕ: ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಕಾಞಂಗಾಡ್ ಜಿ.ವಿ.ಎಚ್.ಎಸ್ ಅಂಬಲತರದಲ್ಲಿ ನಡೆದ ಕಾಸರಗೋಡು ರೆವೆನ್ಯೂ ಜಿಲ್ಲಾ ವಿಜ್ಞಾನೋತ್ಸವ ಸ್ಪರ್ಧೆಯಲ್ಲಿ ಹೈಸ್ಕೂಲ್ ವಿಭಾಗದ ಸ್ಟಫ್ಡ್ ಟೊಯ್ ಸ್ಪರ್ಧೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ದೀಕ್ಷಾ.ಜೆ ಇವರು ‘ಎ’ ಗ್ರೇಡ್ ನೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ಜಾಲುಮೂಲೆ ಎಸ್ ನಾರಾಯಣ, ಪುಷ್ಪ ದಂಪತಿಯರ ಪುತ್ರಿಯಾಗಿದ್ದು, ಶ್ರೀಕೃಷ್ಣ ಬಾಲಗೋಕುಲ ಅರಿಯಪ್ಪಾಡಿ ಮಾಡದ ವಿದ್ಯಾರ್ಥಿಯಾಗಿದ್ದಾಳೆ.




-%20Deeksha.jpg)
