ಬದಿಯಡ್ಕ: ಕುಂಬ್ಡಾಜೆ ಗ್ರಾಮಸೇವಾಸಂಘ ಗ್ರಂಥಾಲಯ ಏತಡ್ಕ ಇದರ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಕಾರ್ಯಕಾರಿ ಸಮಿತಿ ಸಭೆ ಸೋಮವಾರ ಏತಡ್ಕದ ಸಮಾಜಮಂದಿರದಲ್ಲಿ ಜರುಗಿತು. ವೈ ವಿ ಸುಬ್ರಹ್ಮಣ್ಯ ಭಟ್ ಅವರ ಅಧ್ಯಕ್ಷತೆಯಲ್ಲಿ ಮೂರುವರ್ಷಗಳ ಅವಧಿಗೆ (2023-26) ನವ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ವೈ. ಕೆ ಗಣಪತಿ ಭಟ್ ಏತಡ್ಕ, ಉಪಾಧ್ಯಕ್ಷೆಯಾಗಿ ಶಾಂತಕುಮಾರಿ ಕಳೆಯತ್ತೋಡಿ, ಕಾರ್ಯದರ್ಶಿಯಾಗಿ ಗಣರಾಜ ಕೆ ಏತಡ್ಕ ಜೊತೆ ಕಾರ್ಯದರ್ಶಿಯಾಗಿ ಉದಯಶಂಕರ ಭಟ್ ಸಿ. ಚೈತ್ರ ನಿವಾಸ ಅವರನ್ನು ನೇಮಕಗೊಳಿಸಲಾಯಿತು. ಮಾಜಿ ಕಾರ್ಯದರ್ಶಿ ವೇಣುಗೋಪಾಲ್ ಕೆ, ಸ್ವಾಗತಿಸಿ, ಹಾಲಿ ಕಾರ್ಯದರ್ಶಿ ಗಣರಾಜ ಕೆ ವಂದಿಸಿದರು.




.jpg)
