ಕಾಸರಗೋಡು: ಹದಿನೇಳರ ಹರೆಯದ ಬಾಲಕಿಯ ಅಪಹರಿಸಿ ಅತ್ಯಾಚಾರವೆಸಗಿ ತಲೆಮರೆಸಿಕೊಂಡಿದ್ದ ಕೋಯಿಕ್ಕೋಡ್ ಪೇರಾಂಬ್ರ ಚಾಲಕ್ಕರ ನಿವಾಸಿ ರವೀಂದ್ರನ್(56)ಎಂಬಾತನನ್ನು 30ವಷ್ಗಳ ನಂತರ ಪಯ್ಯನ್ನೂರು ಟಾಣೆ ಪೊಲೀಸರು ಬಂಧಿಸಿದ್ದಾರೆ.
1998 ಫೆಬ್ರವರಿ 15ರಂದು ಪಯ್ಯನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ರವೀಂದ್ರನ್‍ನನ್ನು ಪೊಲಿಸರು ಬಂಧಿಸಿದ್ದು, ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡವನು ತಲೆಮರೆಸಿಕೊಂಡಿದ್ದನು. ನಂತರ ಕೇರಳದ ವಿವಿಧೆಡೆ ಹೆಸರು ಬದಲಾಯಿಸಿ ಕೆಲಸ ನಿರ್ವಹಿಸಿಕೊಂಡಿದ್ದ ಈತ ಹಲವು ಮಂದಿ ಯುವತಿಯರನ್ನು ವಂಚಿಸಿ ಮದುವೆಯಾಗಿದ್ದನು. ತಲೆಮರೆಸಿಕೊಂಡು ಕೋಯಿಕ್ಕೋಡಿನಲ್ಲಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.




