ಉಪ್ಪಳ: ಕೆಲಸಕ್ಕೆ0ದು ತೆರಳಿ ನಿಗೂಢಾಗಿ ನಾಪತ್ತೆಯಾಗಿದ್ದ ಉಪ್ಪಳ ಬಾಯಾರು ಮುಳಿಗದ್ದೆ ತಾಲ್ತಾಜೆ ಕೊರಗ ಕಾಲನಿ ನಿವಾಸಿ, ಮತ್ತಾಡಿ ಎಂಬವರ ಪುತ್ರ ಗೋಪಾಲ(28)ಅವರ ಮೃತದೇಃ ಬಾಯಾರು ಸನಿಹದ ಪೆರುವೋಡಿ ಕುಡಾನ ಎಂಬಲ್ಲಿ ಪತ್ತೆಯಾಗಿದೆ. ಗೋಪಾಲ ಅವರ ಸಾವಿನ ಬಗ್ಗೆ ನಿಗೂಢತೆಯಿರುವುದಾಗಿ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಕೂಲಿಕಾರ್ಮಿಕನಾಗಿರುವ ಗೋಪಾಲ ಅವರು ಮಂಗಳವಾರ ಬೆಳಗ್ಗೆ ಮನೆಯಿಂದ ಕೆಲಸಕ್ಕೆಂದು ತೆರಳಿದವರು, ಅಸೌಖ್ಯದ ಹಿನ್ನೆಲೆಯಲ್ಲಿ ಅಲ್ಪ ಹೊತ್ತಿನಲ್ಲಿ ಮನೆಗೆ ವಾಪಸಾಗಿದ್ದರು. ವಷಧಕ್ಕಾಗಿ ತೆರಳಿದ್ದ ಇವರು, ನಿಗೂಢವಾಗಿ ನಾಪತ್ತೆಯಾಗಿದ್ದು, ಇವರ ಮೊಬೈಲ್‍ಗೆ ಕರೆಮಾಡಿದಾಗ ಒಂದು ಬಾರಿ ಕರೆ ಸ್ವೀಕರಿಸಿದರೂ ಮಾತನಾಡದೆ, ನಂತರ ಸಂಪರ್ಕ ಕಡಿತಗೊಂಡಿತ್ತು.
ಬಹಳ ಹೊತ್ತಿನ ನಂತರ ಮೊಬೈಲ್ ರಿಂಗಣಿಸುತ್ತಿರುವುದನ್ನು ಕೇಳಿ ರಬ್ಬರ್ ಕಾರ್ಮಿಕ ವರ್ಗೀಸ್ ಎಂಬವರು ಸನಿಹ ತೆರಳಿ ರಿಂಗಣಿಸುತ್ತಿದ್ದ ಮೊಬೈಲ್ ಮತ್ತು ಪರ್ಸ್ ಉಪೇಕ್ಷಿತ ಸ್ಥಿತಿಯಲ್ಲಿರುವುದನ್ನು ಕಂಡು ಮಂಜೇಶ್ವರ ಠಾಣೆ ಪೊಲಿಸರಿಗೆ ದೂರು ನೀಡಿದ್ದರು.ಪೊಲಿಸರು ಹಾಗೂ ಸ್ಥಳೀಯರು ಹುಡುಕಾಡಿದರೂ, ಗೋಪಾಲ ಅವರ ಪತ್ತೆಯಾಗದ ಹಿನ್ನೆಲೆಯಲ್ಲಿ ಇವರ ಸಂಬಂಧಿಕರಲ್ಲಿ ಮಾಹಿತಿ ಸಂಗ್ರಹಿಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು.ಮನೆಯವರು, ಸಂಬಂಧಿಕರು ಹಾಗೂ ಸ್ಥಲಿಯರು ಹುಡುಕಾಟ ನಡೆಸುವ ಮಧ್ಯೆ ಪೆರುವೋಡಿ ಕುಡಾನ ನಿವಾಸಿ ರಾಮಚಂದ್ರ ಬಟ್ ಎಂಬವರ ಹಿತ್ತಿಲಲ್ಲಿ ಮೃತದೇಹ ಕಂಡುಬಂದಿತ್ತು. ಔಷಧಕ್ಕಾಗಿ ತೆರಳಿದವರು ಒಂದು ಕಿ.ಮೀ ದೂರದಲ್ಲಿ ಶವವಾಗಿ ಪತ್ತೆಯಾಗಿರುವ ಬಗ್ಗೆ ವ್ಯಾಪಕ ನಿಗೂಢತೆ ಕಂಡುಬಂದಿದೆ.




