HEALTH TIPS

ನವಕೇರಳ ಸಮಾವೇಶದಲ್ಲಿ ಸಲ್ಲಿಸಿದ ಮನವಿ: 4 ಲಕ್ಷ ರೂ.ಗಳ ಸಾಲಕ್ಕೆ ಪರಿಹಾರ ಕೇವಲ 515 ರೂ.ಗಳ ರಿಯಾಯಿತಿ!

                    ತಿರುವನಂತಪುರಂ: ನವಕೇರಳ ಸಮಾವೇಶಕ್ಕೆ ದೂರುಗಳೊಂದಿಗೆ ಬಂದವರನ್ನು ಅಧಿಕಾರಿಗಳು ಮೂರ್ಖರನ್ನಾಗಿಸಿದ್ದಾರೆ. ಪರಿಹಾರ ಕ್ರಮ ಕೂಲಿಯನ್ನು ಗೇಲಿ ಮಾಡುವುದಾಗಿತ್ತು.

                   4 ಲಕ್ಷ ಸಾಲ ಮನ್ನಾ ಮಾಡುವಂತೆ ನವಕೇರಳ ಸದಸ್‍ಗೆ ಬಂದ ದೂರುದಾರರಿಗೆ ಕೇವಲ 515 ರೂ.ಪರಿಹಾರ ಕಲ್ಪಿಸಲಾಗಿರುವುದು ಚರ್ಚೆಗೊಳಗಾಗಿದೆ. ಕಣ್ಣೂರು ಇರಿಟ್ಟಿಯಲ್ಲಿ ನಡೆದ ನವಕೇರಳ ಸದಸ್‍ನಲ್ಲಿ ದೂರುದಾರರು ಮನವಿ ಸಲ್ಲಿಸಿದ್ದರು. 

              ಮನೆ ರಿಪೇರಿಗೆ ಮಾಡಿದ ಸಾಲ ತೀರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನವಕೇರಳ ಸನಾವೇಶಕ್ಕೆ ಬಂದು ಒಬ್ಬರು ದೂರು ನೀಡಿದ್ದರು. ನಂತರ ಡಿಸೆಂಬರ್ 6 ರಂದು ಸಹಕಾರ ಸಂಘದ ಜಂಟಿ ನಿಬಂಧಕರಿಂದ ದೂರು ಇತ್ಯರ್ಥ ಪಡಿಸಲಾಗಿದೆ ಎಂದು ಸೂಚನೆ ಬಂದಿದೆ. 515 ಕಡಿತಗೊಳಿಸಲಾಗಿದೆ ಎಂದು ಜಂಟಿ ನೋಂದಣಾಧಿಕಾರಿ ಮಾಹಿತಿ ನೀಡಿರುವರು.

            ದೂರುದಾರರು 3,97,731 ರೂ.ಗಳ ಸಾಲ ಬಾಕಿಗೆ ಪರಿಹಾರ ಕೇಳಿದ್ದರು. 515 ಕಡಿತಗೊಳಿಸಿ ಉಳಿದ 3,97,216 ರೂ.ಗಳನ್ನು ಇದೇ 31ರೊಳಗೆ ಪಾವತಿಸಬೇಕು ಎಂದು ತಿಳಿಸಲಾಗಿದೆ. ಕುಂದುಕೊರತೆಗಳನ್ನು ನಿವಾರಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದ್ದರೂ ಸಹ ಇಂತಹ ವ್ಯವಸ್ಥೆಗಳಷ್ಟೇ ಪರಿಹಾರವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries