ಮಂಜೇಶ್ವರ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು, ಉಪ್ಪಳ ಘಟಕದ ವಾರ್ಷಿಕೋತ್ಸವ ಇತ್ತೀಚೆಗೆ ಬಾಳ್ಯೂರು ಅಯ್ಯಪ್ಪ ಮಂದಿರ ವಠಾರದಲ್ಲಿ ಸಡಗರದಿಂದ ಜರಗಿತು.
ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ “ಕಾಯಕಲ್ಪ” ಯಕ್ಷಗಾನ ಬಯಲಾಟ ಜರಗಿತು.
ಅಪರಾಹ್ನ ಬಾಳ್ಯೂರು ಶ್ರೀ ಅಯ್ಯಪ್ಪ ಮಂದಿರ ಆಶ್ರಯ ಹಾಗೂ ಸಹಯೋಗದೊಂದಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಉಪ್ಪಳ ಘಟಕದ ಸಹಕಾರದೊಂದಿಗೆ ತರಬೇತಿ ಪಡೆದ ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಂದ ಸುದರ್ಶನ ವಿಜಯ- ನರಕಾಸುರವಧೆ ಯಕ್ಷಗಾನ ಪ್ರದರ್ಶನಗೊಂಡಿತು. ಹಿರಿಯ ಯಕ್ಷಗಾನ ಗುರು ಶೇಖರ ಶೆಟ್ಟಿ ಬಾಯಾರು ಯಕ್ಷಗಾನ ತರಬೇತಿ ನೀಡಿದ್ದರು.




.jpg)
