ಕಾಸರಗೋಡು: ಬೇಕಲ ಬೀಚ್ ಫೆಸ್ಟಿವಲ್ ನಲ್ಲಿ ಸ್ಟಾಲ್ ಹಂಚಿಕೆಯಲ್ಲಿ ಪಾರದರ್ಶಕತೆ ಕಾಪಾಡುವಂತೆ ಆಲ್ ಕೇರಳ ಕೇಟರರ್ಸ್ ಒಕ್ಕೂಟದ ಪದಾಧಿಕಾರಿಗಳು ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದ್ದಾರೆ. ರಾಜ್ಯಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಬೇಕಲ್ ಬೀಚ್ ಉತ್ಸವದಲ್ಲಿ ಪ್ರಸಕ್ತ ವ್ಯಾಪಾರಿ ಮಳಿಗೆಗಳನ್ನು ನೇರವಾಗಿ ಖಾಸಗಿಯವರಿಗೆ ಹಂಚಿಕೆ ಮಾಡಲಾಗಿದ್ದು, ಇವರು ಮತ್ತೆ ವ್ಯಾಪಾರಿಗಳಿಗೆ ಇದನ್ನು ಹಂಚುತ್ತಿದ್ದು, ಭಾರೀ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿರುವುದಾಗಿ ಸಂಘಟನೆ ರಾಜ್ಯ ಕಾರ್ಯದರ್ಶಿ ಆರ್.ವಿಮಲ್ ಕುಮಾರ್ ತಿಳಿಸಿದ್ದಾರೆ.
ಬಿಡ್ಡಿಂಗ್ ವಿಧಾನದ ಮೂಲಕ ಪಾರದರ್ಶಕವಾಗಿ ವ್ಯಾಪಾರಿ ಮಳಿಗೆಯನ್ನು ಹರಾಜುಗೊಳಿಸದೆ, ಇಲ್ಲಿ ಲೋಪವೆಸಗಲಾಗಿದೆ. ಇದರಿಂದ ಬೀಚ್ ಫೆಸ್ಟ್‍ನಲ್ಲಿ ಮಳಿಗೆಗಳಲ್ಲಿ ವ್ಯಾಪಾರ ನಡೆಸುವವರು ಆಹಾರಸಾಮಗ್ರಿಗಳಿಗೆ ಭಾರಿ ಮೊತ್ತ ನೀಡಬೇಕಾಗುತ್ತದೆ. ಇದು ಗ್ರಾಹರ ಸುಲಿಗೆಗೆ ಕಾರಣವಗಲಿದೆ. ಸ್ಟಾಲ್ ನಡೆಸುವವರಿಗೆ ತಾವು ನಿಗದಿಪಡಿಸಿದ ದರದಲ್ಲಿ ಸಂಘಾಟಕರೇ ಸಾಮಗ್ರಿ ಪೂರೈಸುತ್ತಿದ್ದು, ಅವರು ನಿಗದಿಪಡಿಸಿದ ದರವನ್ನು ನೀಡಬೇಕಾಗುತ್ತದೆ. ಇದರಿಂದ ಸ್ಟಲ್‍ಗಳಲ್ಲಿ ಆಹಾರಪದಾರ್ಥಗಳಿಗೆ ಭಾರಿ ಮೊತ್ತ ವಿಧಿಸುವುದು ಅನಿವಾರ್ಯವಾಗುತ್ತದೆ.
ಬೀಚ್ ಉತ್ಸವ ಸಂದರ್ಭ ಸ್ವಾಗತ ಸಮಿತಿಗೆ, ಅತಿಥಿಗಳಿಗೆ ಆಹಾರ ಪದಾರ್ಥ ಪೂರೈಸಲು ಪ್ರತ್ಯೇಕ ಕ್ವಟೇಸನ್ ಆಹ್ವಾನಿಸಬೇಕು.ಈ ಪ್ರಕ್ರಿಯೆ ಮೂಲಕ ಪಾರದರ್ಶಕತೆ ಕಾಯದುಕೊಳ್ಳುವಂತೆ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗಿದೆ. ಇನ್ನು ನೇರ ಹರಾಜಿನ ಮೂಲಕ ಮಳಿಗೆಗಳಿಗೆ ಅವಕಾಶ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಅಬ್ದುಲ್ ಖಾದರ್, ಮನ್ಸೂರ್ ಕೆ.ಕೆ ಉಪಸ್ಥಿತರಿದ್ದರು.




