HEALTH TIPS

ದೇಶದಲ್ಲಿ 827 ಜೆಎನ್‌.1 ಪ್ರಕರಣ ವರದಿ

             ವದೆಹಲಿ: ದೇಶದ 12 ರಾಜ್ಯಗಳಲ್ಲಿ ಕೋವಿಡ್‌ ವೈರಾಣುವಿನ ಹೊಸ ಉಪತಳಿ ಜೆನ್‌.1 ಪ್ರಕರಣ ವರದಿಯಾಗಿದ್ದು, ಇಲ್ಲಿಯವರೆಗೆ ಒಟ್ಟು 827 ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

              ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, 250 ಪ್ರಕರಣಗಳು ವರದಿಯಾಗಿವೆ.

                   ಕರ್ನಾಟಕದಲ್ಲಿ 199, ಕೇರಳದಲ್ಲಿ 155, ಗೋವಾದಲ್ಲಿ 49, ಗುಜರಾತ್‌ನಲ್ಲಿ 36, ಆಂಧ್ರ ಪ್ರದೇಶದಲ್ಲಿ 30, ರಾಜಸ್ಥಾನದಲ್ಲಿ 30, ತಮಿಳುನಾಡು ಮತ್ತು ತೆಲಂಗಾಣದಲ್ಲಿ 26, ರಾಜಧಾನಿ ದೆಹಲಿಯಲ್ಲಿ 22, ಒಡಿಶಾದಲ್ಲಿ 3 ಮತ್ತು ಹರ್ಯಾಣದಲ್ಲಿ 1 ಪ್ರಕರಣ ವರದಿಯಾಗಿದೆ.

                ದೇಶದಲ್ಲಿ ಕೋವಿಡ್ ಉಪತಳಿಯ ಪ್ರಕರಣಗಳು ಹೆಚ್ಚು ವರದಿಯಾಗಿದ್ದರೂ ಆತಂಕಪಡುವ ಯಾವುದೇ ಅಂಶ ಕಂಡುಬಂದಿರಲಿಲ್ಲ. ಸೋಂಕಿತರಲ್ಲಿ ಹೆಚ್ಚಿನವರು ಮನೆ ಆರೈಕೆ ಆರಿಸಿಕೊಂಡಿದ್ದು, ಗುಣಮುಖರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

                ಕೋವಿಡ್ ಉಪತಳಿಯ ಪ್ರಕರಣಗಳು ವರದಿಯಾಗುತ್ತಿದ್ದಂತೆ ಹೆಚ್ಚಿನ ನಿಗಾ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ, ರಾಜ್ಯಗಳಿಗೆ ತಿಳಿಸಿತ್ತು. ಅಲ್ಲದೇ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವಂತೆ ತಿಳಿಸಿತ್ತು. ಜಿಲ್ಲಾವಾರು ವರದಿ ಮಾಡುವಂತೆಯೂ ಸೂಚಿಸಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries